ಬೆಂಗಳೂರು: ವಿಧಾನಸಭಾ ಕಲಾಪ ಆರಂಭವಾಗಿದ್ದು, ಕಲಾಪ ಆರಂಭವಾಗುತ್ತಿದ್ದಂತೆ ಆಪರೇಷನ್ ಆಡಿಯೋ ವಿಚಾರದ ಬಗ್ಗೆ ಸ್ಪೀಕರ್ ಪ್ರಸ್ತಾಪಿಸಿದರು.ಸ್ಪೀಕರ್ ಆದವರು ಸದನದ ಮೌಲ್ಯಗಳ ಪ್ರತೀಕ ಆಗಿರುತ್ತಾರೆ. ಆಡಿಯೋದಲ್ಲಿ ನನ್ನ ಹೆಸರು ಪ್ರಸ್ತಾಪವಾಗಿದೆ. 50 ಕೋಟಿ ರೂ, ಕೊಟ್ಟು ಬುಕ್ ಮಾಡಲಾಗಿದೆ ಎಂದು ಹೇಳಲಾಗಿದೆ .ನನ್ನ ಹೆಸರು ಮಾತ್ರ ಅಲ್ಲ ದೇಶದ ಪ್ರಧಾನಿ ಹೆಸರನ್ನೂ ಬಳಸಲಾಗಿದೆ ಇದು ದೇಶಕ್ಕೆ, ಸಂಸತ್ತು ಹಾಗೂ ಶಾಸನ ಸಭೆಗೆ ಗೌರವ ತರುವುದಿಲ್ಲ. 50 ಕೋಟಿ ರೂ ಆರೋಪದ ಬಗ್ಗೆ ನೋವಿನಿಂದ ಎರಡು ದಿನಗಳನ್ನು ಕಳೆಯಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.










