ಪೂರ್ಣಕುಂಬ ಕಲಶದೊಂದಿಗೆ ಪಾವನಕೀರ್ತಿ ಜೈನ ಮುನಿಯನ್ನು ಸಂಸೆ ಗ್ರಾಮಸ್ಥರು ಅದ್ದೂರಿಯಿಂದ ಗ್ರಾಮಕ್ಕೆ ಬರ ಮಾಡಿಕೊಂಡರು.

529
firstsuddi

ಕಳಸ- ಚಾತುರ್ಮಾಸವನ್ನು ಆಚರಿಸಲು ಪಾವನಕೀರ್ತಿ ಜೈನ ಮುನಿಗಳು ಇಲ್ಲಿಯ ಸಂಸೆ ಗ್ರಾಮಕ್ಕೆ ಬಂದಿದ್ದು, ಇಲ್ಲಿಯ ಜೈನ ಬಾಂದವರು ಅದ್ದೂರಿಯಾಗಿ ಪೂರ್ಣಕುಂಬದೊಂದಿಗೆ ಸ್ವಾಗತಿಸಿದರು.ಶ್ರವಣ ಬೆಳಗೊಳದಲ್ಲಿ ಬಾಹುಬಲಿ ಮಸ್ತಕಾಭಿಷೇಕ ನೆರವೇರಿದ ನಂತರ ಸಂಸೆಯ ದೇವರಮನೆಯ ಪದ್ಮಾವತಿ ದೇವಸ್ಥಾನದ ಪಂಚಕಲ್ಯಾಣಕ್ಕೆ ಪಾವನಕೀರ್ತಿ ಮುನಿಗಳು ಬಂದಿದ್ದರು.ಆ ಸಂದರ್ಭದಲ್ಲಿ ಸಂಸೆಯಲ್ಲಿ ಚಾತುರ್ಮಾಸ ಆಚರಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು.ಕಳಸ ಹೋಬಳಿಯಲ್ಲಿ ಕೆಲ ಕಾಲ ವಿಹಾರ ಮಾಡಿದ ನಂತರ ಮುನಿಗಳು ಕಾಲ್ನಡಿಗೆಯ ಮುಖಾಂತರ ಸಂಸೆಗೆ ತೆರಳಿದರು.ಸಂಸೆಯ ಜೈನ ಬಾಂದವರು ಮುನಿಗಳನ್ನು ಪೂರ್ಣಕುಂಬ ಕಲಶದೊಂದಿಗೆ ಗ್ರಾಮಕ್ಕೆ ಬರ ಮಾಡಿಕೊಂಡರು.ಸಂಸೆಯ ತ್ಯಾಗಿ ಭವನದಲ್ಲಿ ಮುನಿಗಳು ತಂಗಲಿದ್ದು,ನಾಲ್ಕು ತಿಂಗಳುಗಳ ಕಾಲ ಧರ್ಮ ಪ್ರಭಾವನೆ ಬೀರಲಿದ್ದಾರೆ. ಸಂಸೆಯ ಜೈನ ತೀರ್ಥಕ್ಷೇತ್ರ ಸಮಿತಿ,ಜೈನ್ ಮಿಲನ್,ಜೈನ ಮಹಿಳಾ ಮಂಡಳಿ,ವೀರಸೇವಾದಳ ಒಗ್ಗೂಡಿ ಈ ಚಾತುರ್ಮಾಸವನ್ನು ಆಯೋಜಿಸಿದೆ ಎಂದು ಸಂಸೆಯ ಪ್ರದೀಪ್ ಜೈನ್ ತಿಳಿದಿದ್ದಾರೆ.