ಶ್ರೀರಾಮನ ಪೂಜೆ ಮಾಡುವ ಜನ ಹೊರಗೆ ಬಂದು ಶ್ರೀರಾಮನ ಹೆಸರಿನಲ್ಲಿ ಕೊಲೆ ಮಾಡುತ್ತಿದ್ದಾರೆ! : ಶಾಸಕ ಇಕ್ಬಾಲ್ ಅನ್ಸಾರಿ

829

ಕೊಪ್ಪಳ : ಮುಸ್ಲಿಂ ಸಮುದಾಯ ಎದುರಿಸುತ್ತಿರುವ ವರ್ತಮಾನದ ಸವಾಲುಗಳು ಕುರಿತಂತೆ ನಡೆದ ಕಾರ್ಯಕ್ರಮದಲ್ಲಿ ಗಂಗಾವತಿಯ ಶಾಸಕರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ನಡೆದ ಸಭೆಯಲ್ಲಿ ರಾಜಕೀಯ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿದೆ.  ನಮಗೆ ಇರುವ ದೇಶಾಭಿಮಾನ, ಅವರಿಗೆ ಇಲ್ಲ ಎಂದು ,ಮನೆಯಲ್ಲಿ  ಶ್ರೀರಾಮನ ಪೂಜೆ ಮಾಡುವ ಜನ ಹೊರಗಡೆ ಬಂದು ಶ್ರೀರಾಮನ ಹೆಸರಿನಲ್ಲಿ ಕೊಲೆಮಾಡುತ್ತಿದ್ದಾರೆಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದ್ದು ವಿವಾದಕ್ಕೆ ಕಾಣರವಾಗಿದೆ.  ಕೊಪ್ಪಳ ಮುಸ್ಲಿಂ ಚಿಂತಕರ ಚಾವಡಿಯ ನೇತೃತ್ವದಲ್ಲಿ ನಡೆದ ಮುಸ್ಲಿಂರ ವರ್ತಮಾನ ಸವಾಲುಗಳು ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಸಂಘಪರಿವಾರದ ಕೃತ್ಯಗಳನ್ನು ಖಂಡಿಸಿದರು.

ಮನೆಯಲ್ಲಿ ಶ್ರೀರಾಮನ ಪೂಜೆ ಮಾಡ್ತಾರೆ, ಹೊರಗಡೆಬಂದು ಶ್ರೀರಾಮನ ಹೆಸರಲ್ಲಿ, ಕೊಲೆ, ಲೂಟಿ, ದಡಲಬಾಜಿ ಮಾಡ್ತಾರೆ. ಶ್ರೀರಾಮ್  ಹೆಸರಲ್ಲಿ ವಿಷಬೀಜ ಬಿತ್ತನೆ ಮಾಡ್ತಾರೆ. ಯಾವುದೇ ದೇವರಾಯಿತು ಮತ್ತು ಧಾರ್ಮಿಕ ಪುಸ್ತಕಗಳಾಯಿತು  ಕೊಲೆ, ಸುಲಿಗೆ ಮಾಡಿ ಎಂದು ಹೇಳಿಲ್ಲ. ಎಲ್ಲಾ ಕುಮ್ಮಕ್ಕು ಇವರು ಮಾಡ್ತಾರೆ. ನಮ್ಮ ಯುವಕರನ್ನು ಜೈಲಿಗೆ ಹೋಗುವಂತೆ ಮಾಡಲು ಬೇಕೆಂದು ಕುಮ್ಮಕ್ಕು ಕೊಡ್ತಿದಾರೆ. ಮೋದಿ ಪ್ರಧಾನಿ ಆದ್ಮೇಲೆ  ಇದು ಹೆಚ್ಚಾಗಿದೆ. ಅವರಿಗೆ ಸಂವಿಧಾನ,ಕಾನೂನು ಇಲ್ಲ. ಪರೋಕ್ಷವಾಗಿ ಹೇಳಿದರು. ಪೊಲೀಸ್ ಇಲಾಖೆಯವರುನಮ್ಮವರಲ್ಲ.ಅವರು ಪೊಲೀಸರಿಗೆ ಲೇ ಅಂತಾರೆ, ಮುಸ್ಲಿಂ ಸಮುದಾಯವರು  ರೀ ಎಂದು ಮಾತಾಡ್ತೀವಿ. ಮುಸ್ಲೀ ಸಮುದಾಯದ ಯುವಕರುಕಾನೂನು ಚೌಕಟ್ಟು   ಬಿಟ್ಟು ಹೋಗಬಾರದು.ಯಾವುದೇ ಹಬ್ಬ ಹರಿದಿನಗಳಲ್ಲಿ ಕಾನೂನು ಚೌಕಟ್ಟು ಬಿಟ್ಟು ಹೋಗಬೇಡಿ. ಪೋಲಿಸ್ಇಲಾಖೆಯವರು ನಮ್ಮವರಲ್ಲ, ನಮ್ಮ ಯುವಕರು ೨೫% ಗಲಾಟೆ ಮಾಡಿದರೆ ಕೂಡಾ ನಮ್ಮವರನ್ನೆಒಳಗಡೆ ಹಾಕುತ್ತಾರೆ. ಅವರು ೭೫% ನಷ್ಟು ತಪ್ಪು ಮಾಡಿದರೂ ಕೂಡಾ ಅವರನ್ನು ಬಂಧಿಸಲ್ಲ. ಇದು ಕೇವಲ ಕೊಪ್ಪಳದಲ್ಲಿ ಮಾತ್ರವಲ್ಲಿ ಗಂಗಾವತಿ ಸೇರಿದಂತೆ ಎಲ್ಲೆಡೆ ಇದೆ. ಮೋದಿ ಪ್ರದಾನಿ ಆದ ಮೇಲೆ ಇದು ಜಾಸ್ತಿ ಆಗಿದೆ. ಇಂದು ಪೋಲಿಸರು ಕೂಡಾ ಅವರಿಗೆ ಹೆದರುತ್ತಿದೆ. ಹೀಗಾಗಿ ಮುಸ್ಲಿಂ ಯುವಕರು ತಪ್ಪು ಮಾಡಬೇಡಿ, ನಿಮಗೆ ರೌಡಿ ಶೀಟರ್ ಹಾಕುತ್ತಾರೆ ಎಂದರು.

ಇದಕ್ಕೂ ಮೊದಲು ನಡೆದ ಕಾರ್ಯಕ್ರಮವನ್ನು ಶಾಸಕ ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು. ಮುಸ್ಲಿಂ ಸಾಧಕರ ಕಿರುಪರಿಚಯದ ಬ್ಯಾನರ್ ಗಳನ್ನು ರಜಾಕ್  ಉದ್ಘಾಟಿಸಿದರು. ಮುಸ್ಲಿಂ ಸಮುದಾಯದ ತೊಂದರೆ ತಾಪತ್ರಯಗಳನ್ನು ಹೇಳಿಕೊಳ್ಳಲು ಕರೆಯಲಾಗಿದ್ದ ಸಭೆಯಲ್ಲಿ ಕಾಂಗ್ರೆಸ್  ಪಕ್ಷಕ್ಕೆ ಮತ ನೀಡಿ ಎಂದು ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದ್ದರ ವಿರುದ್ದ ಸಂಘಟಕರು ಮತ್ತು ಯುವಕರು ಹರಿಹಾಯ್ದರು. ಶಾಸಕ ಇಕ್ಬಾಲ್ ಅನ್ಸಾರಿ ಮತ್ತು ಜೆಡಿಎಸ್ ಕಾರ್ಯಕರ್ತರ ಜಟಾಪಟಿಯೂ ಸಹ ನಡೆಯಿತು. ಸಮಾಜದ ಕಾರ್ಯಕ್ರಮದಲ್ಲಿ ರಾಜಕೀಯ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು. ಸಮಾವೇಶದಲ್ಲಿ ಮುಸ್ಲಿಂ ಬಾಂಧವರು ಕಾಂಗ್ರೆಸ್ಗೆ ಮತಹಾಕಿ ಅಂತಾ ಹೇಳಿಕೆ ನೀಡಿದ ಶಾಸಕ ಇಕ್ಬಾಲ್ಅನ್ಸಾರಿ.

ಇದಕ್ಕೆ ಕೆರಳಿದ ಕೆಲ ಅಲ್ಪಸಂಖ್ಯಾತಮುಖಂಡರಿಂದ ಆಕ್ಷೇಪ ವ್ಯಕ್ತಪಡಿಸಿದರು.  ಮುಸ್ಲಿಂ ಸಮಯದಾಯದ ಸಾಧಕರನ್ನೂ ಸಹ ಇದೇ ಸಂದರ್ಭದಲ್ಲಿ  ಸನ್ಮಾನಿಸಲಾಯಿತು. ಒಟ್ಟಿನಲ್ಲಿ ಸವಾಲುಗಳಿಗೆ ಉತ್ತರ  ಕಂಡುಕೊಳ್ಳ ಬೇಕಾದ ಸಮಾವೇಶ ಯಶಸ್ವಿಯಾಗುವುದರ ಜೊತೆಗೆ ಹೊಸ ಪ್ರಶ್ನೆಗಳನ್ನೂ ಹುಟ್ಟುಹಾಕಿತು.