ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ…

698
firstsuddi

ನವದೆಹಲಿ- ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 78.52 ರೂ. ಆಗಿದ್ದು, ಡೀಸೆಲ್ ಬೆಲೆ 70.21 ರೂ.ಗೆ ಏರಿದೆ. ನಿನ್ನೆಯಷ್ಟೇ ಪೆಟ್ರೋಲ್ ಬೆಲೆ 78.30 ರೂ. ಹಾಗೂ ಡೀಸೆಲ್ ಬೆಲೆ 69.93 ರೂ. ಇತ್ತು. ಒಂದೇ ದಿನ ಕಳೆಯುತ್ತಿದ್ದಂತೆಯೇ ಪೆಟ್ರೋಲ್ 22 ಪೈಸೆ ಹಾಗೂ ಡೀಸೆಲ್ 28 ಪೈಸೆಯಷ್ಟು ಏರಿಕೆ ಕಂಡಿದೆ.ಮುಂಬೈನಲ್ಲಿ ಪೆಟ್ರೋಲ್ ಬೆಲೆ 85.93 ರೂ. ಆಗಿದ್ದು, ಡೀಸೆಲ್ ಬೆಲೆ 74.53 ರೂ. ಆಗಿದೆ. ನಿನ್ನೆಗೆ ಹೋಲಿಸಿದರೆ ಇದು ಕ್ರಮವಾಗಿ 21 ಪೈಸೆ ಹಾಗೂ 30 ಪೈಸೆಯಷ್ಟು ಹೆಚ್ಚಿದೆ. ನಿನ್ನೆ ಪೆಟ್ರೋಲ್ ಬೆಲೆ 85.72 ರೂ. ಹಾಗೂ ಡೀಸೆಲ್ ಬೆಲೆ 74.24 ರೂ.ಇತ್ತು.