ದೆಹಲಿ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪೆಟ್ರೋಲ್, ಡೀಸೆಲ್ ದರದಲ್ಲಿ 2.50 ರೂ. ದರ ಇಳಿಕೆ ಮಾಡಲಾಗುವುದು. ಕೇಂದ್ರದಿಂದ ಅಬಕಾರಿ ಸುಂಕದಲ್ಲಿ 1.50 ರೂ. ಮತ್ತು ತೈಲ ಕಂಪನಿಗಳಿಂದ 1 ರೂ. ಇಳಿಕೆ ಮಾಡಲಾಗುವುದು .ಎಲ್ಲ ರಾಜ್ಯಗಳಿಗೂ 2.50 ರೂ. ಕಡಿಮೆ ಮಾಡಲು ಮನವಿ ಮಾಡಿದ್ದು, ರಾಜ್ಯಗಳು ತೈಲ ಬೆಲೆ ಕಡಿಮೆ ಮಾಡಿದರೆ ತೈಲ ಬೆಲೆ 5 ರೂ. ಕಡಿಮೆ ಆಗಲಿದೆ ಎಂದಿದ್ದಾರೆ.










