ವಿಷ ಪ್ರಸಾದ ದುರಂತ: ಸಾವಿನ ಸಂಖ್ಯೆ 16ಕ್ಕೆ ಏರಿಕೆ…

199
firstsuddi

ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ  ಕಿಚ್ಚುಗತ್ತಿ ಮಾರಮ್ಮನ ದೇವಾಲಯದಲ್ಲಿ ವಿಷ  ಪ್ರಸಾದ ಸೇವಿಸಿ  ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ನಾಗೇಶ್ (45) ಅವರು ಮೇಕೆ ಮೇಯಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ದೇವಸ್ಥಾನದಲ್ಲಿ  ವಿಷ ಪ್ರಸಾದ ಸೇವಿಸಿ  ಅಸ್ವಸ್ಥರಾಗಿದ್ದ  ಅವರನ್ನು ಮೈಸೂರಿನ ಜೆಎಸ್​ಎಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಗೇಶ್ ಅವರು ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.