ಈ ಸುದ್ದಿ ಓದಿ.. ಹೆಂಡತಿ-ಮಗುವಿನ ಬಗ್ಗೆ ಎಷ್ಟು ಕೇರ್ ತಗೋಳ್ತೀರಾ ನೋಡಿ..

1053

ಸುಂದರ ಬದುಕಿಗಾಗಿಯೋ ಅಥವ ಸಂಸಾರದ ಜಂಜಾಟಗಳನ್ನ ನಿಯಂತ್ರಿಸಲೋ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ  ಬಹುತೇಕ ಮಹಿಳೆಯರು ತಮಗೊಪ್ಪುವ ವೃತ್ತಿ ಆಯ್ದುಕೊಳ್ತಿದ್ದಾರೆ. ಒಂದು ಹೆಚ್ಚು, ಒಂದು ಕಡಿಮೆಯಾಗದಂತೆ ಸಂಸಾರ ಹಾಗೂ ಕಚೇರಿ ಎರಡನ್ನೂ ಸರಿದೂಗಿಸಿಕೊಂಡು ಹೋಗೋ ಅನಿವಾರ್ಯತೆ ಅವಳದ್ದು. ಇಂತಹಾ ಹೋರಾಟದ ಬದುಕು ಸಾಗಿಸ್ತಿರೊ ಮಹಿಳೆಯರು ಗರ್ಭಿಣಿಯರಾದ್ರೆ ಅವರ ಬದುಕು ನಿಜಕ್ಕೂ ಅಗ್ನಿ ಪರೀಕ್ಷೆಯಾಗಿರುತ್ತೆ. ಮನೆ ಹಾಗೂ ಆಫೀಸ್ ಕೆಲಸವನ್ನು ನೋಡಿಕೊಳ್ಳೋದ್ರ ಜೊತೆ ಆಕೆ ತನ್ನ ಆರೋಗ್ಯದ ಕಡೆಯೂ ಗಮನ ಹರಿಸಬೇಕು. ಯಾಕಂದ್ರೆ, ಆರೋಗ್ಯವಂತ ಮಹಿಳೆಗೆ ಜನ್ಮ ನೀಡೋದು ಆರೋಗ್ಯವಂತ ಮಹಿಳೆ ಮಾತ್ರ.

ಕೆಲಸದ ಒತ್ತಡದಿಂದ ಆಕೆ ಸುಸ್ತಾಗಿ ಬಿಡ್ತಾಳೆ. ಮನಸ್ಸಿನ ಹಗುರತೆಯೇ ಇಲ್ಲದಂತಾಗಿಬಿಡುತ್ತೆ. ಹಾಗಾಗಿ ಗರ್ಭಿಣಿ ಮಹಿಳೆಗೆ ಮಸಾಜ್ ಮಾಡೋದು ಉತ್ತಮ ಪರಿಹಾರ. ಆಕೆಗೆ ಮಸಾಜ್ ಮಾಡೋದ್ರಿಂದ ಸ್ನಾಯು ಹಾಗೂ ಗಂಟಿನ ಭಾಗ ಉತ್ತಮಗೊಂಡು ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಠಳಾಗ್ತಾಳೆ. ಹೆರಿಗೆ ಪೂರ್ವ, ಹೆರಿಗೆ ನಂತರ ಮತ್ತು ಮಗು ಜನಿಸಿದ ನಂತರವೂ ಮಸಾಜ್ ತಾಯಿ ಮಗುವಿನ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು.

ಸ್ನಾಯುಗಳು ಹಾಗೂ ಗಂಟಿನ ಕಾರ್ಯಚಟುವಟಿಕೆಗೆ ಗರ್ಭೀಣಿ ಮಹಿಳೆಯರಿಗೆ ಮಸಾಜ್ ರಾಮಬಾಣ. ಹೆರಿಗೆ ಪೂರ್ವ ಮಸಾಜ್‌ಡೆಲವರಿ ವೇಳೆಯ ಕೆಲ ಸಮಸ್ಯೆಗಳನ್ನ ನಿವಾರಿಸುತ್ತೆ. ಇದು ತಾಯಿ ಹಾಗೂ ಮಗುವಿನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿತ್ತೆ. ಕೆಲವೊಂದು ಸ್ನಾಯುಗಳು ಬಲಿಷ್ಠಗೊಂಡು ನೈಸರ್ಗಿಕ ಹೆರಿಗೆಯಾಗುವಂತೆ ಮಾಡೋದ್ರಲ್ಲಿ ಮಸಾಜ್ ಪಾತ್ರ ಬಹಳಷ್ಟಿದೆ. ಹೆಚ್ಚಿನ ಮಹಿಳೆಯರು ನಾರ್ಮಲ್ ಹೆರಿಗೆ ಬಯಸುತ್ತಾರೆ. ಅಂತವರಿಗೆ ಮಸಾಜ್ ಮಾಡೋದ್ರಿಂದ ನೋವು ಹಾಗೂ ಆತಂಕ ಕಡಿಮೆಯಾಗತ್ತೆ. ಹೆರಿಗೆ ನಂತರದ ಮಸಾಜ್ ತಾಯಿಯ ದೇಹಸ್ಥಿತಿಯನ್ನ ಹತೋಟಿಗೆ ತಂದು ದೇಹದಲ್ಲಿ ನೀರು ನಿಲ್ಲೋದನ್ನ ಶಮನ ಮಾಡುತ್ತದೆ.
ಹೆರಿಗೆ ಮೊದಲು ಹಾಗೂ ನಂತರದ ಮಸಾಜ್ ಮಹಿಳೆಯ ದೇಹಕ್ಕೆ ಪುನಶ್ಚೇತನ ನೀಡೋದ್ರ ಜೊತೆ ಶಕ್ತಿಯನ್ನು ತುಂಬುತ್ತದೆ. ಆದ್ರೆ, ಮಸಾಜ್ ಬಗ್ಗೆ ಗರ್ಭೀಣಿ ಮಹಿಳೆ ವೈದ್ಯರನ್ನ ಭೇಟಿಯಾಗಿ ಸಲಹೆ ಪಡೆಯುವುದು ಒಳ್ಳೆಯದು. ಆದ್ರೆ, ಮಸಾಜ್ ಮಹಿಳೆಯರಿಗೆ ದೈಹಿಕ ಹಾಗೂ ಮಾನಸಿಕ ನೆಮ್ಮದಿ ನೀಡಿ ಸುಲಭವಾಗಿ ಹೆರಿಗೆ ಆಗುವಂತೆ ಮಾಡಲಿದೆ.

 

LEAVE A REPLY

Please enter your comment!
Please enter your name here