ಭ್ರಷ್ಟಾಚಾರ ನಿಗ್ರಹ ದಳದ ಎಸ್.ಪಿ ಶೃತಿ ನೇತೃತ್ವದಲ್ಲಿ ದಾಳಿ, ಪ್ರಾಜೆಕ್ಟ್ ಇಂಜಿನಿಯರ್ ಎನ್ ನಾಗೇಶ್ ಬಂಧನ…

428
firstsuddi

ಮಂಗಳೂರು: ಜಿಲ್ಲಾ ಪಂಚಾಯಿತ್ ಕಛೇರಿಯ ಸಮಗ್ರ ಗ್ರಾಮೀಣಾ ಇಂಧನ ಯೋಜನೆಯ ಪ್ರಾಜೆಕ್ಟ್  ಇಂಜಿನಿಯರ್ 30,000 ರೂ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಪೊಲೀಸರು ದಾಳಿ ನಡೆಸಿ ಎನ್ ನಾಗೇಶ್ ಪ್ರಾಜೆಕ್ಟ್  ಇಂಜಿನಿಯರ್ ನನ್ನು ಬಂಧಿಸಿದ್ದು, ಸಬ್ಸಿಡಿ ಹಣ ಬಿಡುಗಡೆ ಮಾಡಲು 50,000 ರೂ ಲಂಚ ಕೊಡುವಂತೆ ಪೀಡಿಸುತ್ತಿದ್ದರು ಎಂದು ಹೇಳಲಾಗಿದ್ದು, ಇದರಿಂದ ಬೇಸತ್ತ ಸಂತ್ರಸ್ತರೊಬ್ಬರು ಮಂಗಳೂರು ಭ್ರಷ್ಟಚಾರ ನಿಗ್ರಹ ದಳ ಠಾಣೆಗೆ ದೂರು ನೀಡಿದ್ದು, ಅದರಂತೆ ಇಂದು ದಾಳಿ ನಡೆಸಿ ಆರೋಪಿ ಎನ್ ನಾಗೇಶ್ ನನ್ನು ಬಂಧಿಸಲಾಗಿದ್ದು, ಭ್ರಷ್ಟಾಚಾರ ನಿಗ್ರಹ ದಳದ ಎಸ್.ಪಿ ಶೃತಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಡಿವೈಎಸ್ ಪಿ ಸುಧೀರ್, ಇನ್ ಸ್ಪೆಕ್ಟರ್ ಯೋಗೇಶ್ ಕುಮಾರ್, ಹಾಗೂ ಸಿಬ್ಬಂದಿಗಳಾದ ಹರಿಪ್ರಸಾದ್,ಉಮೇಶ್,ರಾಧಾಕೃಷ್ಣ ಕೆ, ಪ್ರಶಾಂತ್, ವೈಶಾಲಿ, ರಾಕೇಶ್, ಗಣೇಶ್, ರಾಜೇಶ್, ಹಾಗೂ ಇತರ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಇದ್ದರು.