ಕಳಸ- ಮಂಜಿನಕಟ್ಟೆ ಸಮೀಪ ರಸ್ತೆಯಲ್ಲಿ ಉಂಟಾದ ಹೊಂಡಕ್ಕೆ ಕಳಸದ ಕೆಲ ಯುವಕರು ದೋಣಿ ಮಾಡಿ ಬಿಡುವುದರ ಮೂಲಕ ಪ್ರತಿಭಟನೆ ನಡೆಸಿದರು.
ಕಳೆದ ಜನವರಿಯಲ್ಲಿ ತಿಂಗಳಿನಲ್ಲಿ ನಡೆದ ಈ ಕಾಮಗಾರಿ ಕೇವಲ ಮೂರು ತಿಂಗಳಿನಲ್ಲಿ ಹೊಂಡ ಬಿದ್ದು ಶಿಥಿಲಾವಸ್ಥೆ ತಲುಪಿದ ಈ ರಸ್ತೆಯ ಅವ್ಯವಸ್ಥೆಯ ಬಗ್ಗೆ ವ್ಯಂಗ್ಯವಾಗಿ ಈಜುಕೊಳದ ಉದ್ಘಾಟನೆಯನ್ನು ಸನ್ನಿಲೆಯೋನ್ ಮತ್ತು ದೀಪಿಕಾ ಪಡುಕೋಣೆ ಮಾಡಲಿದ್ದಾರೆ ಎಂದು ಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು.ಇದು ಸಾಕಷ್ಟು ವೈರಲಾಗಿ ಇಲಾಖೆಯನ್ನು ಮುಜುಗರವನ್ನುಂಟು ಮಾಡಿತ್ತು.ಇದರ ಮುಂದುವರೆದ ಬಾಗವಾಗಿ ಭಾನುವಾರ ಮಂಜಿನಕಟ್ಟೆ ಸಮೀಪ ಗುಂಡಿಯಲ್ಲಿ ಕಾಗದದ ದೋಣಿಗಳನ್ನು ಮಾಡಿ ಬಿಡುವುದರ ಮುಖಾಂತರ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಕಳಸ ನಾಗರೀಕರಾದ ಟಿಟ್ಟು ತೋಮಸ್ ಈಜುಕೊಳದ ಉದ್ಘಾಟನೆಗೆ ನಟ ನಟಿಯರು ಬರುತ್ತಾರೆಂದು ವ್ಯಂಗ್ಯ ಚಿತ್ರವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು.ಅದಕ್ಕಾಗಿ ಇವತ್ತು ದೋಣಿ ಬಿಡುವುದರ ಮುಖಾಂತರ ಉದ್ಘಾಟನೆಯನ್ನು ಮಾಡಿದ್ದೇವೆ.ಲೋಕೋಪಯೋಗಿ ಇಲಾಖೆಯ ಪ್ರತಿಯೊಂದು ಕಾಮಗಾರಿಯು ಕಳಪೆ ಮಟ್ಟದಲ್ಲಿ ನಡೆಯುತ್ತಿರುವುರಿಂದ ಹೋಬಳಿಯ ಬಹುತೇಕ ರಸ್ತೆಗಳು ಶಿಥಿಲಾವಸ್ಥೆ ಕಾಣುತ್ತಿವೆ.ಈ ರೀತಿಯ ಕಳಪೆ ಕಾಮಗಾರಿ ಮಾಡಿದ ಸಂಬಂದಪಟ್ಟ ಇಂಜಿನೀಯರನ್ನು ಕೂಡಲೇ ಅಮಾನತು ಮಾಡಿ.ಕಳೆದ ಐದು ವರ್ಷಗಳಿಂದ ಮಾಡಿದ ಕಾಮಗಾರಿಯ ಸಂಪೂರ್ಣ ತನಿಖೆಯನ್ನು ಮಾಡಬೇಕು ಎಂದು ಆಗ್ರಹಿಸಿದರು.
ಇನ್ನೊರ್ವ ನಾಗರೀಕ ರಿಜ್ವಾನ್ ಮಾತನಾಡಿ ಒಂದು ಕೋಟಿ 16 ಲಕ್ಷ ರೂವೆಚ್ಚದ ಕಾಮಗಾರಿ ಮೂರು ತಿಂಗಳಿನಲ್ಲಿ ಶಿಥಿಲಗೊಂಡಿದೆ ಎಂದರೆ ಈ ಕಾಮಗಾರಿಯ ಅಸಲಿ ಎಷ್ಟಿದೆ ಎಂದು ಯೋಚಿಸುವಂತಾಗಿದೆ.ಪ್ರತೀ ಬಾರಿ ಕಾಮಗಾರಿಯ ಬಗ್ಗೆ ಚಕಾರವೆತ್ತಿದರೂ ಕೂಡ ತಮಗೆ ಸಂಬಂದವೇ ಇಲ್ಲದಂತೆ ವರ್ತಿಸುತ್ತಿದೆ ಇಲಾಖೆ.ರಸ್ತೆಯಲ್ಲಿ ಹೊಂಡ ಬಿದ್ದು ಎರಡು ತಿಂಗಳಾದರೂ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಇಂತಹ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಳಸದ ನಾಗರೀಕರಾದ ವೀರೇಂದ್ರ,ಕೆ.ಸಿ.ಮಹೇಶ್,ಅನಿಲ್,ಸುನೀಲ್,ಶಿವಾನಂದ,ಹರ್ಷ,ಸುಬ್ರಮಣ್ಯ,ಇರ್ಷಾದ್ ಇತರರು ಇದ್ದರು.