ಲೋಕೋಪಯೋಗಿ ಇಲಾಖೆ ನಿರ್ಮಿಸಿದ ಈಜು ಕೊಳವನ್ನು ಸನ್ನಿಲೆಯೋನ್ ಮತ್ತು ದೀಪಿಕಾ ಪಡುಕೋಣೆ ಉದ್ಘಾಟನೆ ಮಾಡಲಿದ್ದಾರೆ.???

1075

ಕಳಸ-ಪಟ್ಟಣದ ಮಂಜಿನಕಟ್ಟೆ ಸಮೀಪ ಸುಸಜ್ಜಿತ ಈಜುಕೊಳವೊಂದನ್ನು ನಿರ್ಮಾಣ ಮಾಡಲಾಗಿದ್ದು ಇದರ ಉದ್ಘಾಟನೆಯನ್ನು ಸನ್ನಿಲೆಯೋನ್ ಮತ್ತು ದೀಪಿಕಾ ಪಡುಕೋಣೆ ಮಾಡಲಿದ್ದಾರೆ.ಕಳಸದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು.
ಏನಿದು ಈಜು ಕೊಳ ಉದ್ಘಾಟನೆಗೆ ಸನ್ನಿಲೆಯೋನ್,ದೀಪಿಕಾ ಪಡುಕೋಣೆ ಬರ್ತಾರಾ ಅಂತಹುಬ್ಬೆರೆಸಿಕೊಳ್ಳಬೇಡಿ.ಕಳಸದ ಮುಖ್ಯ ರಸ್ತೆಯ ದುಸ್ಥಿತಿಯ ಬಗ್ಗೆ ಸಾಮಾಜಿಕ ಜಾಲಾ ತಾಣದಲ್ಲಿ ಹರಿದಾಡುತ್ತಿರುವ ಸಂದೇಶವಿದು.

 

ಕಳಸ ಮಂಜಿನಕಟ್ಟೆಯಿಂದ ಅಂಬಾ ತೀರ್ಥಕ್ಕೆ ಹೋಗುವ ತಿರುವಿನ ವರೆಗೆ 1.16 ಕೋಟಿ ಮೋತ್ತದ ಅಗಲೀಕರಣ ಮತ್ತು ಡಾಂಬರೀಕರಣ ನಡೆದಿತ್ತು.ಜನವರಿಯ ಕೊನೇಯ ದಿನಗಳಲ್ಲಿ ಈ ರಸ್ತೆಗೆ ಡಾಂಬರೀಕರಣ ಮಾಡುವಾಗ ಗ್ರಾಮಸ್ಥರು ಇಂಜಿನೀಯರ ಸಮ್ಮುಖದಲ್ಲಿಯೇ ಕಾಮಗಾರಿಯ ಅಸಲಿಯತ್ತನ್ನು ತೋರಿಸಿ ಮರು ಡಾಂಬರೀಕರಣ ಮಾಡಿಸಿದ್ದರು.ಆದರೆ ಮಹಾವೀರ ವೃತ್ತದ ನಂತರ ಹಾಕಿದ ಡಾಂಬಾರು ಹಾಕಿದ ಮೇ ತಿಂಗಳಿನಲ್ಲಿ ರಸ್ತೆಯಲ್ಲಿ ಗುಂಡಿಗಳು ಬಿದ್ದವು.ಮಳೆಗಾಲ ಪ್ರಾರಂಬವಾಗುತ್ತಿದ್ದಂತೆ ಮಂಜಿಕಟ್ಟೆ ಸಮೀಪ ದೊಡ್ಡ ಗುಂಡಿಯೇ ನಿರ್ಮಾಣವಾಗಿದೆ.ಅಲ್ಲದೆ ರಸ್ತೆಯದ್ದಕ್ಕೂ ಅಲ್ಲಲ್ಲಿ ಗುಂಡಿಗಳು ಬಿದ್ದು ಕಾಮಗಾರಿಯ ಅಸಲಿಯತ್ತು ಎದ್ದು ಕಾಣುತ್ತಿದೆ.ಇದರಿಂದ ವಾಹನ ಸವಾರರು ತೀರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಇದನ್ನು ಅಣಕಿಸುವಂತೆ ಪಟ್ಟಣದ ಸಾಮಾಜಿಕ ಕಾರ್ಯಕರ್ತರೊಬ್ಬರು ರಸ್ತೆಯಲ್ಲಿ ಬಿದ್ದಿರುವ ಗುಂಡಿಯಲ್ಲಿ ಸನ್ನಿಲೆಯೋನ್ ಮತ್ತು ದೀಪಿಕಾ ಪಡುಕೋಣೆ ಕುಳಿತಿರುವ ಚಿತ್ರವನ್ನು ಎಡಿಟ್ ಮಾಡಿ ಲೋಕೋಪಯೋಗಿ ಇಲಾಖೆ ನಿರ್ಮಿಸಿದ ಈಜು ಕೊಳವನ್ನು ಸನ್ನಿಲೆಯೋನ್ ಮತ್ತು ದೀಪಿಕಾ ಪಡುಕೋಣೆ ಉದ್ಘಾಟನೆ ಮಾಡಲಿದ್ದಾರೆ.


ಈಜು ಕೊಳವನ್ನು ವಿದೇಶಿ ಮೋಡೆಲ್ ಕ್ವಾಲಿಟ್ ಚೆಕ್ ಮಾಡಿದ್ದಾರೆ,ಈಜುಕೊಳಕ್ಕೆ ಹಾನಿಯಾಗದಂತೆ ವಾಹನ ಚಲಾಯಿಸಿ,ದೇಶ ಪ್ರಖ್ಯಾತವಾಗಲಿರುವ ಮುಖ್ಯ ರಸ್ತೆಯ ಲೋಕೋಪಯೋಗಿ ಇಲಾಖೆಯ ಈಜುಕೊಳ,ಚಿತ್ರರಂಗಂದ ಪ್ರಸಿದ್ಧ ನಟ ವಿಜಯ್ ಅವರು ಕಳಸಕ್ಕೆ ಆಗಮಿಸಿದ್ದು ಕಳಸದ ರಸ್ತೆಯಲ್ಲಿ ನಿರ್ಮಾವಾದ ಈಜುಕೊಳವನ್ನು ನೋಡಿ ಸೆಲ್ಫಿ ತೆಗೆದುಕೊಂಡರು ಇತ್ಯಾದಿ ಬರಹಗಳೊಂದಿಗೆ ಇಲಾಖೆಯನ್ನು ಎಚ್ಚರಿಸುವಂತೆ ಅಣಕಿಸಿ ವ್ಯಾಟ್ಸ್ ಆಪ್,ಪೇಸ್ ಬುಕ್ ಮುಖಾಂತರ ಹರಿಯಬಿಡಲಾಗಿದೆ.ಈಗಾಗಲೇ ನೂರಾರು ಜನರು ಇದನ್ನು ವೀಕ್ಷಿಸಿ ಅಪಹಾಸ್ಯ ಮಾಡಿದ್ದಾರೆ.
ಇಲಾಖೆ ಇನ್ನಾದರೂ ಎಚ್ಚೆತ್ತು ಇಂತಹ ಅಪಹಾಸ್ಯಕ್ಕೆ ತುತ್ತಾಗದೆ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡುತ್ತಾರೋ ನೋಡಬೇಕಾಗಿದೆ.

ಕಳಸ-ಹೊರನಾಡು ರಸ್ತೆಯನ್ನು ಜನವರಿಯಲ್ಲಿ ಮರುಡಾಂಬರೀಕರಣ ಮಾಡಲಾಗಿದೆ.ಕಾಮಗಾರಿ ವೇಳೆ ಕಳಪೆ ಗುಣಮಟ್ಟ ಕಂಡು ಬಂದ ಹಿನ್ನಲೆಯಲ್ಲಿ ಪಟ್ಟಣದ ಸಂಘ ಸಂಸ್ಥೆಗಳು,ಸಾರ್ವಜನಿಕರು ಪ್ರತಿಭಟಿಸಿ.ಮರು ಡಾಂಬರೀಕರಣ ಮಾಡಲಾಗಿದೆ.ಆದರೆ ಈಗ ರಸ್ತೆಯಲ್ಲಿ ಬೃಹತ್ ಗುಂಡಿಗಳು ಬಿದ್ದು ಕಾಮಗಾರಿಯ ಅಸಲಿಯನ್ನು ತೊರಿಸಿದೆ.ಅಧಿಕಾರಿಗಳು,ಗುತ್ತಿಗೆದಾರರು ಗುಣಮಟ್ಟದ ಡಾಂಬರೀಕರಣ ಮಾಡದೆ ಇದ್ದಲ್ಲಿ ಕಳಪೆ ಕಾಮಗಾರಿಯ ಗುಣಮಟ್ಟದ ತನಿಖೆಗಾಗಿ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು.
ಚೆನ್ನಯ್ಯ:ಲೋಕೋಪಯೋಗಿ ಇಲಾಖಾ ಇಂಜಿನೀಯರ್
ಮುಖ್ಯ ರಸ್ತೆಯಲ್ಲಿ ಒಂದೆರಡು ಗುಂಡಿಗಳು ಬಿದ್ದಿವೆ.ಗುಂಡಿ ಬಿದ್ದ ಜಾಗದಲ್ಲಿ ಮೋರಿ ಇದ್ದಿರುವುದರಿಂದ ಈ ಸಮಸ್ಯೆ ಉಂಟಾಗಿದೆ.ಕಾಮಗಾರಿಯ ನಿರ್ವಹಣೆ ಇದೆ ಮಳೆಗಾಲ ಮುಗಿದ ಕೂಡಲೆ ಆ ರಸ್ತೆಯ ನಿರ್ವಹಣೆಯನ್ನು ಮಾಡಲಾಗುತ್ತದೆ.ಸಾಮಾಜಿಕ ಜಾಲಾತಾಣದಲ್ಲಿ ಹರಿದು ಬಿಡಲಾದ ಚಿತ್ರಗಳ ಬಗ್ಗೆ ನಾನೇನೂ ಹೇಳುವುದಿಲ್ಲ.