ನವದೆಹಲಿ: ಲೋಕಸಭೆಯಲ್ಲಿ ಅವಿಶ್ವಾಸ ಚರ್ಚೆ ವೇಳೆ ಭಾಷಣದುದ್ದಕ್ಕೂ ಮೋದಿಯನ್ನು ಟೀಕಿಸಿದ ರಾಹುಲ್ ಗಾಂಧಿ ಅವರು ನಾನು ನಿಮಗೆ ಪಪ್ಪು ಇರಬಹುದು. ಆದರೆ ಕಾಂಗ್ರೆಸ್ ಪಕ್ಷ ದೇಶ ಕಟ್ಟಿದೆ., ನಿಮ್ಮನ್ನೂ ಕಾಂಗ್ರೆಸ್ಸಿಗರನ್ನಾಗಿ ಮಾಡುವೆ ಎಂದು ಹೇಳಿದ್ದಲ್ಲದೆ, ಪ್ರಧಾನಿ ಮೋದಿ ಕುಳಿತಿದ್ದ ಕಡೆ ತೆರಳಿ ಅವರನ್ನು ಆಲಿಂಗಿಸಿಕೊಂಡರು. ಮತ್ತೆ ತಮ್ಮ ಸ್ಥಳಕ್ಕೆ ಬಂದು, ನಾನು ಹಿಂದು, ನೀವು ಎಷ್ಟೇ ದೂರ ತಳ್ಳಿದರೂ ಹತ್ತಿರಮಾಡಿಕೊಳ್ಳುತ್ತೇನೆ ಎಂದ ರಾಹುಲ್ ಗಾಂಧಿ ಅವರು ಮೋದಿ ಕಡೆ ನೋಡಿ ಕಣ್ಣು ಹೊಡೆದರು ಈ ವಿಶೇಷ ಘಟನೆ ಸದನದಲ್ಲಿ ಇದ್ದವರನ್ನು ಕೆಲ ಕಾಲ ನಗುವಂತೆ ಮಾಡಿತು