12 ವರ್ಷಗಳಿಂದ ತುಂಬದ ಎನ್.ಆರ್.ಪುರದ ಚೆಕ್ ಡ್ಯಾಂ ಈ ವರ್ಷ ಮೈದುಂಬಿ ಹರಿಯುತ್ತಿದೆ.

321

ಚಿಕ್ಕಮಗಳೂರು- ಕಳೆದ 12 ವರ್ಷಗಳಿಂದ ತುಂಬದ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬೃಹತ್ ಚೆಕ್ ಡ್ಯಾಂ ಈ ವರ್ಷ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ನೋಡೋಕೆ ಮಿನಿ ಡ್ಯಾಂನಂತಿರೋ ಈ ಬೃಹತ್ ಚೆಕ್ ಡ್ಯಾಂ ತುಂಬಿರೋದ್ರಿಂದ ಕುಡಿಯೋ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಥಳಿಯರಲ್ಲೂ ಸಂತಸ ಮೂಡಿದೆ. ಇದೊಂದೆ ಅಲ್ಲ, ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಜಿಲ್ಲೆಯ ಎಲ್ಲಾ ನದಿಗಳು, ಹಳ್ಳ-ಕೊಳ್ಳಗಳು, ಚೆಕ್ ಡ್ಯಾಂಗಳು, ಕೆರೆಕಟ್ಟೆಗಳು ಮೈದುಂಬಿ ಹರಿಯುತ್ತಿದ್ರೆ, ನದಿಗಳು ತಿಂಗಳಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಎನ್.ಆರ್.ಪುರ ಭಾಗದಲ್ಲಿ ಭಾರೀ ಮಳೆಯಾಗ್ತಿದ್ದು, ಭದ್ರಾ ಡ್ಯಾಂಗೂ ಕೂಡ ಅಪಾರ ಪ್ರಮಾಣದ ನೀರು ಹರಿದು ಹೋಗ್ತಿದೆ.