ಮ್ಯಾಜಿಸ್ಟ್ರೇಟ್ ಆಸನದಲ್ಲಿ ಕುಳಿತು ಸೆಲ್ಫೀ ತೆಗೆದುಕೊಳ್ಳುತ್ತಿದ್ದ ರಾಮ್ ಅವತಾರ್ ರಾವತ್ ಬಂಧನ…

326
firstsuddi

ಭೋಪಾಲ್- ಪೊಲೀಸ್ ತರಬೇತಿ ಪಡೆಯುತ್ತಿದ್ದ ರಾಮ್ ಅವತಾರ್ ರಾವತ್ ಎಂಬ ಯುವಕ ಉಮರಿಯಾ ಕೋರ್ಟ್ ರೂಮಿನಲ್ಲಿ ಜ್ಯುಸಿಷಿಯಲ್ ಮ್ಯಾಜಿಸ್ಟ್ರೇಟ್ ಕೆ.ಪಿ. ಸಿಂಗ್ ಅವರ ಆಸನದಲ್ಲಿ ಕುಳಿತು ಸೆಲ್ಫೀ ತೆಗೆದುಕೊಳ್ಳುತ್ತಿದ್ದ ಆ ಸಂದರ್ಭದಲ್ಲಿ ಕಛೇರಿಯ ಸಿಬ್ಬಂದಿ ನೋಡಿ ಪ್ರಶ್ನೆ ಮಾಡಿದ್ದಕ್ಕೆ ಸಿಬ್ಬಂದಿಯ ಜತೆ ಅಹಂಕಾರದಲ್ಲಿ ವರ್ತಿಸಿ ತಾನು ಪೊಲೀಸ್ ಏನು ಬೇಕಾದರು ಮಾಡುತ್ತೇನೆ ಎಂಬ ಅಸಡ್ಡೆ ಉತ್ತರವನ್ನು ನೀಡಿದ್ದು, ನಂತರ ಪೊಲೀಸ್ ಸ್ಥಳಕ್ಕೆ ಬಂದು ಯುವಕನನ್ನು ಬಂಧಿಸಲಾಗಿದೆ ಹಾಗೂ ರಾಮ್ ಅವತಾರ್ ರಾವತ್ ಅವರ ಮೇಲೆ ಅಪರಾಧ ಸಾಭೀತಾದರೆ ಪೊಲೀಸ್ ಕೆಲಸದಿಂದ ವಜಾಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.