ಚಿಕ್ಕಮಗಳೂರು- ಕೊಪ್ಪ ತಾಲೂಕಿನ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ಕಾಲೇಜಿಗೆ ಬರ್ತಿದ್ದಾರೆ. ಹಲವು ವರ್ಷಗಳಿಂದಲೂ ಕಾಲೇಜಿಗೆ ಬರ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನ ರೆಸ್ಟ್ ರೂಂನಲ್ಲಿ ಬುರ್ಕಾವನ್ನ ತೆಗೆದಿಟ್ಟು ಎಲ್ಲಾ ವಿದ್ಯಾರ್ಥಿಗಳಂತೆ ತರಗತಿಗೆ ಹಾಜರಾಗ್ತಿದ್ರು. ಆದ್ರೆ, ಈ ವರ್ಷ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಕಾ ಧರಿಸೇ ತರಗತಿ ಬರ್ತಿದ್ರು. ಇಷ್ಟು ವರ್ಷವಿದ್ದಂತೆ ಇರಲಿ, ಅವರಿಗೆ ಬುರ್ಕಾ ತೆಗೆದು ಬರುವಂತೆ ಹೇಳಿ ಎಂದು ಎಬಿವಿಪಿ ವಿದ್ಯಾರ್ಥಿಗಳು ಪ್ರಾಂಶುಪಾಲ ಅನಂತ್ ಅವರಿಗೆ ಜೂನ್ 30ರ ಶನಿವಾರ ಮನವಿ ಮಾಡಿದ್ರು. ಆದ್ರೆ,ಪ್ರಿನ್ಸಿಪಾಲ್ ಅನಂತ್ ಆ ರೀತಿ ಕಾನೂನಲ್ಲಿ ಅವಕಾಶವಿಲ್ಲ, ಸ್ಕಾರ್ಫ್ ಧರಿಸದಂತೆ ನಿರ್ಬಂಧವಿಲ್ಲ ಎಂದು ಹೇಳಿದ್ರಂತೆ. ಪ್ರಾಂಶುಪಾಲರ ಹೇಳಿಕೆಯಿಂದ ಕೆರಳಿದ ಎಬಿವಿಪಿ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ಕಾಲೇಜಿಗೆ ಬರೋದಾಗಿ ,ಪ್ರಿನ್ಸಿಪಾಲ್ ಗೆ ಸೆಡ್ಡು ಹೊಡಿದಿದ್ರು. ಹೇಳಿದಂತೆ ಜುಲೈ 2ನೇ ತಾರೀಖು ಸೋಮವಾರ ಎಬಿವಿಪಿ ವಿದ್ಯಾರ್ಥಿಗಳೆಲ್ಲರೂ ಕಾಲೇಜಿಗೆ ಕೇಸರಿ ಶಲ್ಯ ಧರಿಸೇ ಕಾಲೇಜಿಗೆ ಬಂದಿದ್ದಾರೆ.