ಪ್ರೀತಿಸಿದ ಯುವತಿ ಸಿಗದಿದ್ದಕ್ಕೆ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿ ನೇಣಿಗೆ ಶರಣಾದ ಯುವಕ…

391
firstsuddi

ತುಮಕೂರು- ತುರುವೇಕೆರೆ ನಗರದ ಕ್ಯಾತಸಂದ್ರ ನಿವಾಸಿ ರಾಘವೇಂದ್ರ (26) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಯುವಕ ಕಳೆದ 5 ವರ್ಷಗಳಿಂದ ತುರುವೇಕೆರೆ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದು, ಇಬ್ಬರ ಜಾತಿ ಬೇರೆ ಬೇರೆಯಾಗಿದ್ದರಿಂದ ಯುವತಿಯ ತಂದೆ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವಕ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿ ನೇಣಿಗೆ ಶರಣಾಗಿದ್ದು ಆ ವಿಡಿಯೋದಲ್ಲಿ “ಜಾತಿ ಜಾತಿ ಎಂದು ಯಾಕೆ ಸಾಯ್ತೀರಾ”. ಸತ್ತ ಮೇಲೆ ಜಾತಿ ಹೊತ್ತ್ಕೊಂಡ್ ಹೋಗ್ತೀರಾ? ನಾನಿನ್ನು ನಿನ್ನ ಮಗಳ ತಂಟೆಗೆ ಬರಲ್ಲ. ಅವಳು ಚೆನ್ನಾಗಿರಲಿ ಎಂದು ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.