ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಸ್ಯಾಂಡಲ್ವುಡ್ ನ ಪ್ರಸಿದ್ಧ ನಟ, ನಿರ್ಮಾಪಕರ ಮನೆ ಮೇಲೆ ಐಟಿ ಇಲಾಖೆ ದಾಳಿ ನಡೆಸಿ ಬಿಗ್ ಶಾಕ್ ನೀಡಿದೆ. ಮಾನ್ಯತಾ ಟೆಕ್ ಪಾರ್ಟ್ ಬಳಿಕ ಶಿವರಾಜ್ ಕುಮಾರ್ ನಿವಾಸ, ಬೆಂಗಳೂರಿನ ಸದಾಶಿವನಗರದ ಪುನೀತ್ ರಾಜ್ಕುಮಾರ್ ನಿವಾಸ, ಮಹಾಲಕ್ಷ್ಮಿ ಲೇಟ್ ಔಟ್ ನಲ್ಲಿರುವ ರಾಕ್ ಲೈನ್ ವೆಂಕಟೇಶ್ ಅವರ ನಿವಾಸ , ನಿರ್ಮಾಪಕ ಜಯಣ್ಣ ನಿವಾಸ, ಕಿಚ್ಚ ಸುದೀಪ್ ನಿವಾಸ , ವಿಲನ್ ಚಿತ್ರದ ನಿರ್ಮಾಪಕ ಸಿ.ಆರ್. ಮನೋಹರ್ ನಿವಾಸ , ಕೆಜಿಎಫ್ ಖ್ಯಾತಿಯ ನಿರ್ಮಾಪಕ ವಿಜಯ್ ಕಿರಗಂದೂರು ನಿವಾಸ, ರಾಕಿಂಗ್ ಸ್ಟಾರ್ ಯಶ್ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.










