ಮೂಡಿಗೆರೆ- ಶಾಲಾ ಮಕ್ಕಳ ಗೋಳು ಕೇಳೋರಿಲ್ಲ. ಸರಿಯಾದ ಸಮಯಕ್ಕೆ ಬಸ್ ಸಿಗದೆ ದಿನನಿತ್ಯ ಮಕ್ಕಳಿಗೆ ಸಮಸ್ಯೆ ಆಗುತ್ತಿದ್ದು, ಸಂಜೆ 4ಗಂಟೆಗೆ ಶಾಲೆ ಬಿಟ್ಟರು ಬಸ್ ಬರೋದು 6:30ಕ್ಕೆ ಈ ಬಗ್ಗೆ ಹಲವು ಭಾರಿ ಜಿಲ್ಲಾಧಿಕಾರಿ ಹಾಗೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಮನವಿ ಕೊಟ್ಟರು ಪ್ರಯೋಜನವಾಗದ ಹಿನ್ನಲೆ ಇದರಿಂದ ಆಕ್ರೋಶಗೊಂಡ ಮೂಡಿಗೆರೆ ತಾಲೂಕಿನ ಬಲಿಗೆ ಗ್ರಾಮಸ್ಥರು ಖಾಸಗಿ ಬಸ್ ತಡೆದು ಮಳೆಯಲ್ಲೇ ಪೋಷಕರು ಹಾಗೂ ಶಾಲಾ ಮಕ್ಕಳು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿದರು.