ಶಿವಮೊಗ್ಗ : ಶ್ರುತಿ ಮೋಟಾರ್ಸ್‌ ಮೇಲೆ ಐಟಿ ದಾಳಿ…

179
firstsuddi

ಶಿವಮೊಗ್ಗ : ಇಂದು ಬೆಳಿಗ್ಗೆ ಸಚಿವ ಹಾಗೂ ಸಿಎಂ ಕುಮಾರಸ್ವಾಮಿ ಆಪ್ತರಾದ ಸಿ.ಎಸ್. ಪುಟ್ಟರಾಜು ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರ ಆಪ್ತರ ನಿವಾಸದ ಮೇಲೆ ಹಾಗೂ ಚಿಕ್ಕಮಗಳೂರಿನ ಪಿಡಬ್ಲ್ಯುಡಿ ಗುತ್ತಿಗೆದಾರನ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಇದರ ಬೆನ್ನೆಲೆ ಶಿವಮೊಗ್ಗದಲ್ಲಿಯೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗ ನಗರದ ಶಂಕರಮಠ ರಸ್ತೆಯಲ್ಲಿರುವ ಶ್ರುತಿ ಮೋಟಾರ್ಸ್ ಕಾರು ಶೋ ರೂಂ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.