ಬೆಂಗಳೂರು: ನಟಿ ಶೃತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, 5 ಪುಟಗಳಷ್ಟು ದೂರಿನ ಪ್ರತಿಗಳನ್ನೂ ಶ್ರುತಿ ಹರಿಹರನ್ ಸಲ್ಲಿಸಿದ್ದಾರೆ. ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ಯುಬಿಸಿಟಿಯ ಪಬ್ ವೊಂದರಲ್ಲಿ ಅರ್ಜುನ್ ಸರ್ಜಾ ಅವರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದು, ನಾನು ಅಂದು ಮೌನವಾಗಿದ್ದೆ ಯಾಕೆಂದರೆ ನಾನು ಆಗಷ್ಟೆ ಬೆಳೆಯುತ್ತಿರುವ ನಟಿಯಾಗಿದ್ದೆ ಎಂದಿದ್ದಾರೆ.ಶೃತಿ ಹರಿಹರನ್ ದೂರು ನೀಡಿದ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಐಪಿಸಿ ಸೆಕ್ಷನ್ 354, 354 ಎ, 509ರ ಅಡಿ ಎಫ್ಐಆರ್ ದಾಖಲಾಗಿದೆ. ಶೃತಿ ಹರಿಹರನ್ ಅವರು ದೂರಿನ ಪ್ರತಿಯಲ್ಲಿ ಶ್ರೀಮತಿ ಶೃತಿ(ವೈಫ್ ಆಫ್ ರಾಮ್ ಕುಮಾರ್) ಎಂದು ಉಲ್ಲೇಖಿಸಿದ್ದಾರೆ.











