ಜಯನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್‍ನ ಅಭ್ಯರ್ಥಿ ಸೌಮ್ಯರೆಡ್ಡಿ 11ನೇ ಸುತ್ತಿನಲ್ಲೂ ಮುನ್ನಡೆ.

259
firstsuddi

ಬೆಂಗಳೂರು- ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 11ನೇ ಸುತ್ತಿನ ಬಳಿಕವು ಕಾಂಗ್ರೇಸ್ ಮುನ್ನಡೆ. ಕಾಂಗ್ರೇಸ್ ಅಭ್ಯರ್ಥಿ 43476 ಮತಗಳು, ಬಿ.ಜೆ.ಪಿ ಪ್ರಹ್ಲಾದ್ ಬಾಬುಗೆ 30695 ಮತಗಳು, ಪಕ್ಷೇತರ ಅಭ್ಯರ್ತಿ ರವಿಕೃಷ್ಣರೆಡ್ಡಿ 950 ಮತಗಳು ಗಳಿಸಿದ್ದು. ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಪುತ್ರಿ ಸೌಮ್ಯರೆಡ್ಡಿ 12781 ಮತಗಳ ಮುನ್ನಡೆ 11ನೇ ಸುತ್ತು ಪೂರ್ಣಗೊಂಡಾಗ ಗಳಿಸಿದ್ದಾರೆ. ಇನ್ನೂ ಐದು ಸುತ್ತುಗಳ ಮತ ಎಣಿಕೆ ಬಾಕಿ ಉಳಿದಿದೆ.