ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದವತಿಯಿಂದ ಎಸ್. ಎಲ್ ,ಧರ್ಮ ಗೌಡರಿಗೆ ಸನ್ಮಾನಿಸಲಾಯಿತು.

634
firstsuddi

ಚಿಕ್ಕಮಗಳೂರು:- ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಎಸ್.ಎಲ್.ಧರ್ಮೇಗೌಡರವರು ಇತ್ತೀಚೆಗೆ ವಿಧಾನ ಪರಿಷತ್ ಶಾಸಕಾರಾಗಿ ಆಯ್ಕೆಯಾಗಿದ್ದು ಅವರನ್ನು ಮೂಡಿಗೆರೆ ತಾಲ್ಲೂಕು ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದವತಿಯಿಂದ ಡಿ.ಸಿ.ಸಿ ಬ್ಯಾಂಕ್‍ನಲ್ಲಿಂದು ಸನ್ಮಾನಿಸಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಘದ ಅದ್ಯಕ್ಷರಾದ ಟಿ.ಎಂ.ಗಜೇಂದ್ರ,ಉಪಾದ್ಯಕ್ಷರಾದ ಜಿ.ಬಿ.ಲಕ್ಷ್ಮಿ,ನಿರ್ದೇಶಕರುಗಳಾದ ಬಿ.ಎಸ್.ವಿಕ್ರಂ,ಬಿ.ಎಸ್.ಕಲ್ಲೇಶ್,ಬಿ.ಆರ್. ಅಭಿಪಾಷ್,ಬಿ.ಎನ್.ಕೃಷ್ಣೇಗೌಡ,ಬಿ.ಎಂ.ಸತೀಶ್,ಕೆ.ಟಿ.ರುದ್ರೇಗೌಡ,ಬ್ಯಾಂಕಿನ ಕಾರ್ಯ ನಿರ್ವಾಹಣಾಧಿಕಾರಿ ಜಿ.ಪಿ.ನಿಶಾಂತಿ ಮತ್ತಿತರರಿದ್ದರು.