ಬಣಕಲ್ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ 9ನೇ ವಾರ್ಷಿಕೋತ್ಸವ ಪೂಜೆ ಆಚರಣೆ…

236

ಮೂಡಿಗೆರೆ : ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನ ಸುಭಾಷ್ ನಗರ ಬಣಕಲ್‍ನಲ್ಲಿ 9ನೇ ವರ್ಷದ ವರ್ಧಂತಿ ವಾರ್ಷಿಕೋತ್ಸವವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.
ಶ್ರೀ ಶ್ರೀ ದತ್ತಾವಧೂತ ವಿನಯ ಗುರೂಜಿ ಇವರ ಉಪಸ್ಥಿತಿಯಲ್ಲಿ ಹಲವು ವಿಶೇಷ ಪೂಜೆಗಳು ನೆರವೇರಿದ್ದು, ಬಣಕಲ್ ಪೆಟ್ರೋಲ್ ಬಂಕ್‍ನಿಂದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಪೂರ್ಣಕುಂಭ ಸ್ವಾಗತದೊಂದಿಗೆ ಅಲಂಕೃತ ರಥದಲ್ಲಿ ದೇವಸ್ಥಾನಕ್ಕೆ ಕರೆತರಲಾಯಿತು. ನೂರಾರು ಭಕ್ತರು ವಿನಯ್ ಗುರೂಜಿ ಅವರ ಆಶೀರ್ವಾದ ಪಡೆದರು.