ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದಷ್ಟೇ ಅಲ್ಲ ತನ್ನಲ್ಲಿರುವ ಆಸಕ್ತಿಗೆ ಅನುಗುಣವಾಗಿ ಸುಸಂಸ್ಕೃತ ಜೀವನ ರೂಪಿಸಿಕೊಳ್ಳಲು ಕಲಾ ಆರಾಧಕನಾಗುವುದು ಅಗತ್ಯ:ಡಾ||ಎಂ.ಮೋಹನ್ ಆಳ್ವ…

235
firstsuddi

ಕಳಸ: ಸೌಂದರ್ಯ ಪ್ರಜ್ಞೆ ಯಾರಲ್ಲಿದೆಯೋ ಅವನು ದೇಶವನ್ನು ಪ್ರೀತಿಸುತ್ತಾನೆ ಕಲೆಯನ್ನು ಪ್ರೀತಿಸುತ್ತಾನೆ,ಸಾಮರಸ್ಯ ಬದುಕನ್ನು ಪ್ರೀತಿಸುತ್ತಾನೆ ಅವನೇ ಈ ದೇಶದ ಬಹುದೊಡ್ಡ ಸಂಪತ್ತು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ||ಎಂ.ಮೋಹನ್ ಆಳ್ವ ಹೇಳಿದರು.
ಕಳಸ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಬುಧವಾರ ಸಂಜೆ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವ 2019ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಎಂದರೆ ಶಿಕ್ಷಣ ಪಡೆಯುವುದಷ್ಟೇ ಅಲ್ಲ ತನ್ನಲ್ಲಿರುವ ಆಸಕ್ತಿಗೆ ಅನುಗುಣವಾಗಿ ಸುಸಂಸ್ಕೃತ ಜೀವನ ರೂಪಿಸಿಕೊಳ್ಳಲು ಕಲಾ ಆರಾಧಕನಾಗುವುದು ಕೂಡ ಅಗತ್ಯ.ಕಲೆಯನ್ನು ಆಸ್ವಾದಿಸಬೇಕು.ಕಲೆಯನ್ನು ಕಲಿಯುವ ಆಸಕ್ತಿ ಮೂಡಬೇಕು. ಶಾಸ್ತ್ರೀಯವಾದ ಈ ಸಾಂಸ್ಕೃತಿಕ ಸಂಪತ್ತು ಸುಂದರವಾದ ಮನಸ್ಸನ್ನು ಕಟ್ಟಿಕೊಡುತ್ತದೆ.ಇಂತಹ ಸಂಪತ್ತನ್ನು ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಬೇರೆ ದೇಶದಲ್ಲಿ ಇದ್ದರೂ ಕೂಡ ಅದು ಇಷ್ಟೋಂದು ವೈವಿದ್ಯಮಯವಾಗಿಲ್ಲ.
ಬಹಳಷ್ಟು ಕಾರ್ಯಕ್ರಮಗಳಲ್ಲಿ ನಮ್ಮ ಸಂಸ್ಕೃತಿ ಎಂದುಕೊಂಡು ಸುಳ್ಳು ಸಂದೇಶವನ್ನು ನೀಡಲಾಗುತ್ತದೆ.ಅಸಂಬದ್ದ ಸಾಹಿತ್ಯದ ಮುಖಾಂತರ ಮಕ್ಕಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ.ಮನಸ್ಸನ್ನು ಕಟ್ಟಿಕೊಳ್ಳುವ ರೀತಿಯಲ್ಲಿ ಸತ್ಯದ ಸಾಹಿತ್ಯ ಹಾಗು ಸಂಸ್ಕೃತಿ ಯ ಬೋದನೆಯನ್ನು ಮಕ್ಕಳಿಗೆ ನೀಡುವ ಕೆಲಸ ಆಗಬೇಕಾಗಿದೆ.ಇಂತಹ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಸಾಂಸ್ಕೃತಿಕವಾದ ಈ ದೇಶದ ಸಂಪತ್ತನ್ನು ವಿದ್ಯಾರ್ಥಿಗಳ ಮುಖಾಂತರ ಪರಿಚಯ ಮಾಡುವ ದೃಷ್ಠಿಯಿಂದ ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೊರನಾಡು ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಷಿ
ಸಾಂಸ್ಕೃತಿಕ ವೈಭವ ಪರಂಪರೆ ಮತ್ತು ಆಧ್ಯಾತ್ಮಿಕ ಸಂಪತ್ತಿನಿಂದ ಭಾರತಕ್ಕೆ ಜಗದ್ಗುರುವಿಗೆ ಸಿಕ್ಕಿರುವ ಸ್ಥಾನಮಾನ ಸಿಕ್ಕಿದೆ.
ಸಾಂಸ್ಕೃತಿಕ ವೈಭವದಿಂದ ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡು ಶಾಂತಿ,ಸೌಹಾರ್ಧತೆ,ಪ್ರೀತಿ ಅಭಿಮಾನವನ್ನು ಕಾಣಲು ಸಾದ್ಯವಾಗಿದೆ.ದೇಶದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಕಾಣುವಂತ ವ್ಯವಸ್ಥೆಯನ್ನು ಆಳ್ವಾಸ್ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್ ವಿರಾಸತ್ ಕಳಸ ಘಟಕದ ಅಧ್ಯಕ್ಷ ಎಂ.ಎ.ಶೇಷಗಿರಿ,ಶಾಸಕ ಎಂ.ಪಿ.ಕುಮಾರಸ್ವಾಮಿ,ಮಾಜಿ ಶಾಸಕ ಬಿ.ಬಿ.ನಿಂಗಯ್ಯ,ರಾಜಲಕ್ಷ್ಮೀ ಜೋಷಿ,ಜಿ.ಪಂ ಸದಸ್ಯ ಕೆ.ಆರ್.ಪ್ರಭಾಕರ್,ತಾ.ಪಂ ಅಧ್ಯಕ್ಷ ಕೆ.ಸಿ.ರತನ್,ತಾ.ಪಂ ಸದಸ್ಯರಾದ ಮಹಮ್ಮದ್ ರಫೀಕ್,ಗ್ರಾ.ಪಂ ಅಧ್ಯಕ್ಷೆ ರತೀರವೀಂದ್ರ,,ಬ್ಲಾಕ್ ಕಾಂಗ್ರೇಸ್ ಅಧ್ಯಕ್ ಶ್ರೀನಿವಾಸ್ ಹೆಬ್ಬಾರ್, ಬಿಜೆಪಿ ಹೋಬಳಿ ಅಧ್ಯಕ್ಷ ಗಿರೀಶ್ ಹೆಮ್ಮಕ್ಕಿ,ಬಿ.ವಿ.ರವಿ ರೈ,ರುದ್ರಯ್ಯ ಆಚಾರ್,ರಾಮಚಂದ್ರ ಹೆರಬ್ಬಾರ್,ಭರತ್‍ರಾಜ್,ಅನಿಲ್ ಗ್ಯಾವಿನ್,ಮಮ್ತಾಜ್ ಬೇಗಂ,ಬ್ರಹ್ಮದೇವ,ಪದ್ಮಕುಮಾರ್,ಸಂತೋಷ್ ಹಿನಾರಿ,ಪ್ರಕಾಶ್ ಕುಮಾರ್ ಇತರರು ಇದ್ದರು.ನಂತರ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಕೇರಳದ ಮೋಹಿನಿಯಟ್ಟಮ್,ಬಡಕುತಿಟ್ಟು ಯಕ್ಷಗಾನ,ಆಂದ್ರದ ಜನಪದ ಬಂಜಾರ ನೃತ್ಯ,ಮಣಿಪುರಿ ಸ್ಟಿಕ್ ಡ್ಯಾನ್ಸ್,ಶ್ರೀಲಂಕಾದ ಕ್ಯಾಂಡಿಯಮ್ ನೃತ್ಯ,ಶಾಸ್ತ್ರೀಯ ನೃತ್ಯ,ಮಣಿಪುರಿ ದೋಲ್ ಚಲಮ್,ಕಥಕ್ ನೃತ್ಯ,ಒರಿಸ್ಸಾದ ಗೋಟಿಪುವ ನೃತ್ಯ,ಮಲ್ಲಕಂಬ ಮತ್ತು ರೋಪ್ ಕಸರತ್ತು ,ಗುಜರಾತಿನ ಗಾರ್ಭ ಮತ್ತು ದಾಂಡೀಯ,ಪಶ್ಚಿಮ ಬಂಗಾಳದ ಪುರಲಿಯ ಸಿಂಹ ನೃತ್ಯ,ಶ್ಯಾಡೋ ಪ್ಲೇ,ಕಿರು ನಾಟಕಗಳು ನೆರೆದಿದ್ದ 5 ಸಾವಿರಕ್ಕೂ ಹೆಚ್ಚು ಜನರನ್ನು ರಂಜಿಸಿತು.