ಅಂಬಿಯನ್ನು ನೆನೆದು ಭಾವುಕರಾದ ಸುಮಲತಾ…

254
firstsuddi

ಬೆಂಗಳೂರು: ಅಂಬಿ ಮತ್ತು ಸುಮಲತಾ ಅವರ ವಿವಾಹ ವಾರ್ಷಿಕೋತ್ಸವವಾದ ಇಂದು ಅಂಬಿಯನ್ನು ಸ್ಮರಿಸಿ ಸುಮಲತಾ ಅವರು ಫೇಸ್​ಬುಕ್ ನಲ್ಲಿ ಭಾವನಾತ್ಮಕವಾಗಿ ಬರೆದು ಪೋಸ್ಟ್ ಮಾಡಿದ್ದು, 27 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿಶೇಷ ದಿನವಾದ ಇಂದು ನೀವು ನನ್ನ ಪಕ್ಕದಲ್ಲಿಲ್ಲ. ನೀವು ನನ್ನ ಬ್ರಹ್ಮಾಂಡವೇ ಆಗಿದ್ದಿರಿ.  ನೀವು ನನ್ನನ್ನು ಪ್ರೀತಿಸಲು ಶುರು ಮಾಡಿದಾಗಲೇ ಜೀವನ ಪ್ರಾರಂಭವಾಯಿತು. ನೀವು ನನಗೆ ತೋರಿಸಿದ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ಚಳಿಗಾಲದಲ್ಲಿ ಕಂಬಳಿಯಾಗಿ ಮಳೆಗಾಲದಲ್ಲಿ ಛತ್ರಿಯಾಗಿ ನಮ್ಮನ್ನು ರಕ್ಷಿಸುತ್ತಿದ್ದೀರಿ. ನೀವು ನನ್ನ ಹಾಗೂ ನಮ್ಮ ಮಗನ ಬಗ್ಗೆಯೇ  ಕಾಳಜಿ ವಹಿಸುತ್ತೀರಿ.  ನಿಮ್ಮ ಆಶೀರ್ವಾದ ಹಾಗೂ ನಿಮ್ಮ ಪ್ರೀತಿ ಬೇಕು. ನೀವೇ ನಮಗೆ ಸ್ಫೂರ್ತಿ, ನೀವು ಕೋಟಿಗೊಬ್ಬರು ಎಂದು ಫೇಸ್​ಬುಕ್ ನಲ್ಲಿ ಸುಮಲತಾ ಅವರು ಬರೆದು ಪೋಸ್ಟ್ ಮಾಡಿದ್ದಾರೆ.