ಬೆಂಗಳೂರು: ಬುದ್ದಿವಾದ ಹೇಳಿದಕ್ಕೆ ಹೆತ್ತ ತಾಯಿಗೆ ಮಗನೋರ್ವ ಪೊರಕೆಯಿಂದ ಹೊಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜೀವನ್ (19) ಎಂಬಾತ ತಾಯಿ ಎದುರಲ್ಲೇ ಸಿಗರೇಟ್ ಸೇದುತ್ತಿದ್ದ ಹಾಗೂ ಅಪ್ರಾಪ್ತ ಯುವತಿಯನ್ನು ಪ್ರೀತಿಸುತ್ತಿದ್ದ ಇದಕ್ಕೆ ತಾಯಿ ಬುದ್ದಿವಾದ ಹೇಳಿದ್ದಾರೆ. ಇದಕ್ಕೆ ಸಹಿಸದ ಜೀವನ್ ತಾಯಿಗೆ ಪೊರಕೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ತಾಯಿ ಕೈಮುಗಿದು ಬೇಡಿಕೊಂಡರು ಮಗ ಕರುಣೆ ತೋರದೆ ನನ್ನ ವಿಚಾರ ಮಾತನಾಡಿದ್ರೆ ಇದೇ ಥರ ಟ್ರೀಟ್ಮೆಂಟ್ ಇರುತ್ತೆ ಎಂದು ಜೀವನ್ ತಾಯಿಗೆ ಧಮ್ಕಿ ಹಾಕಿದ್ದಾನೆ. ಪುತ್ರನಿಗೆ ಬುದ್ದಿವಾದ ಹೇಳುವಂತೆ ಕೋರಿ ತಾಯಿ ಪೊಲೀಸರ ಮೊರೆ ಹೋಗಿದ್ದು, ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










