ಚಿಕ್ಕಮಗಳೂರು : ಒಂದೇ ದಿನ ಎರಡು ಮಂಗಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಗೋಪಾಲ ಕಾಲೋನಿ ಗ್ರಾಮದಲ್ಲಿ ನಡೆದಿದೆ. ಮಂಗಗಳ ಶವ ಪತ್ತೆ ಹಿನ್ನೆಲೆ ಗೋಪಾಳ ಕಾಲೋನಿ ಸುತ್ತಮುತ್ತಲಿನ ಜನರು ಆತಂಕಕ್ಕೀಡಾಗಿದ್ದಾರೆ. ಸ್ಥಳಕ್ಕೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಚಂದ್ರಶೇಖರ್ ಅವರು ಭೇಟಿ ನೀಡಿ, ಮಂಗಗಗಳ ರಕ್ತದ ಮಾದರಿ ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್ ಗೆ ರವಾನೆ ಮಾಡಿದ್ದಾರೆ. ಬಳಿಕ ಗ್ರಾಮದ ನಡು ತೋಪುಗಳಿಗೆ ಔಷಧ ಸಿಂಪಡಣೆ ಮಾಡಿಸಿದ್ದಾರೆ.










