ಚಿಕ್ಕಮಗಳೂರು : ಶೇಂಗಾ ಮೇವಿನ ಬವಣೆಗೆ ಬೆಂಕಿ ಹತ್ತಿ ಹೊತ್ತಿ ಉರಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ದಂದೂರು ಗ್ರಾಮದಲ್ಲಿ ನಡೆದಿದೆ. ಚಂದ್ರಯ್ಯ ಎಂಬುವರ ಮೇವಿನ ಬವಣೆಗೆ ಜಮೀನಿನಲ್ಲಿದ್ದ ವಿದ್ಯುತ್ ಕಂಬದ ಶಾರ್ಟ್ ಶಕ್ಯೂಟ್ ನಿಂದ ಮೇವಿನ ಬವಣೆಗೆ ಬೆಂಕಿ ಹತ್ತಿಕೊಂಡು ಸಾವಿರಾರು ರೂ ಮೌಲ್ಯದ ಶೇಂಗಾ ಮೇವು ನಷ್ಟ ವಾಗಿದೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.









