ಮೂಡಿಗೆರೆ : ತಾಲ್ಲೂಕಿನ ಗೋಣಿಬೀಡು ಸಮೀಪದ ಸಾಲುಮರದ ಬಿರುದೇವರ ನೂತನ ದೇವಾಲಯದ ಅಭಿವೃದ್ದಿಗೆ ಶಾಸಕರ ಅನುದಾನದಿಂದ ಅನುದಾನ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ದೇವಸ್ಥಾನದ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿದರು.
ಗೋಣಿಬೀಡು ಸಮೀಪದ ಸಾಲುಮರದ ಶ್ರೀಬೀರದೇವರು ಮತ್ತು ಪರಿವಾರ ದೇವರ ಪ್ರತಿಷ್ಠಾಪನಾ ಹಾಗೂ ನೂತನ ದೇವಾಲಯದ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ದೇವಾಲಯವು ಗ್ರಾಮದ ಧಾರ್ಮಿಕ ಹಾಗೂ ಆದ್ಯಾತ್ಮಿಕ ಸಾಧನೆಯ ಕೇಂದ್ರವಾಗಿದ್ದು ದೇವಸ್ಥಾನಗಳು ನಮ್ಮ ಸಂಸ್ಕøತಿಯ ಭಾಗವಾಗಿದೆ. ಒತ್ತಡದ ಜೀವನದ ಸಂದರ್ಭದಲ್ಲಿ ಮಾನಸಿಕವಾಗಿ ನೆಮ್ಮದಿ ಕಾಣಲು ದೇವಾಲಯಗಳು ಸಹಕಾರಿ. ಆಧ್ಯಾತ್ಮಿಕ ಮನಸ್ಥಿತಿಗೆ ದೇವಸ್ಥಾನದ ಪ್ರಶಾಂತ ವಾತಾವರಣ ಹಾಗೂ ನೈರ್ಮಲ್ಯವು ಪ್ರಭಲವಾದ ಪರಿಣಾಮವನ್ನು ಉಂಟುಮಾಡುತ್ತದೆ. ಸನಾತನ ಹಿಂದೂ ಧರ್ಮಕ್ಕೆ ಅನುಸಾರವಾಗಿ ದೇವಾಲಯಗಳನ್ನು ಶಕ್ತಿಕೇಂದ್ರಗಳೆಂದು ನಂಬಲಾಗುತ್ತದೆ. ಇಂಥಹ ಶಕ್ತಿ ಕೇಂದ್ರಗಳಲ್ಲಿ ಮಾನವನಿಗೆ ವಿಶೇಷತರನಾದ ತರಂಗಾಂತರಗಳು ಹರಿದುಬಂದು ಆತನ ಆಚಾರ-ವಿಚಾರ-ಉಚ್ಛಾರ ಶುದ್ಧವಾಗಿರುತ್ತದೆ. ಇದು ನಮ್ಮ ದೇಶದ ಸಂಸ್ಕೃತಿಯನ್ನು ವಿಶ್ವದೆಲ್ಲಡೆ ಪಸರಿಸಲು ಸಾಧ್ಯ. ಇಂಥಹ ದೇವಾಲಯಗಳ ಅಭಿವೃದ್ಧಿಗೆ ಯಾವುದೇ ರೀತಿಯ ಕೆಲಸ ನಿರ್ವಹಿಸಲು ನಾವುಗಳು ಸದಾ ಸಿದ್ಧ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಅಮಿತಮುತ್ತಪ್ಪ ಅವರ ಮಾತನಾಡಿ, ದೇವತೆಗಳು ನಮ್ಮ ಪರಿಸರದ ರಕ್ಷಣಾ ಕರ್ತರಾಗಿದ್ದಾರೆ. ನಮ್ಮ ಸೈನಿಕರು ಗಡಿಯಲ್ಲಿ ನಿಂತು ನಮ್ಮನ್ನು ಹೇಗೆ ಭಯೋತ್ಪಾದಕರಿಂದ ರಕ್ಷಣೆ ಮಾಡುತ್ತಾರೆಯೋ ಹಾಗೆಯೇ ದೇವತೆಗಳು ಅವರಿಗೆ ವಹಿಸಲಾದ ಕ್ಷೇತ್ರಗಳ ಜವಾಬ್ದಾರಿಯನ್ನು ಪಡೆದುಕೊಂಡು ಎಲ್ಲರನ್ನೂ ರಕ್ಷಿಸುವ ಕೆಲಸ ಮಾಡುತ್ತಾರೆ. ದೇವಾಲಯ ಹಾಗೂ ದೇವತೆಗಳ ಮೇಲಿನ ಅಸಡ್ಡೆ ನಮ್ಮ ಸೈನಿಕರ ಮೇಲೆ ತೋರಿಸಿದ ಅಸಡ್ಡೆಯ ರೀತಿಯದೇ ಆಗಿರುತ್ತದೆ. ಸೈನಿಕರನ್ನು ಹೇಗೆ ಗೌರವದಿಂದ ನಡೆಸಿಕೊಳ್ಳುತ್ತೇವೆಯೋ ಅದಕ್ಕಿಂತಲೂ ಹೆಚ್ಚಿನ ಗೌರವದಿಂದ ಕಾಣುವಂತಾಗಬೇಕು. ಇಲ್ಲವಾದಲ್ಲಿ ನಮ್ಮ ನಾಶವನ್ನು ನಾವೇ ಮಾಡಿಕೊಂಡಂತೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಶಿವೆಗೌಡ, ತಾಪಂ ಸದಸ್ಯ ಸುಂದರ್ ಕುಮಾರ್, ಗ್ರಾಪಂ ಅಧ್ಯಕ್ಷ ದಿನೇಶ್, ಶಿವಕುಮಾರ್, ಭರತ್, ಕಡ್ಡಿಶಿವಣ್ಣ, ಪುಟ್ಟೆಗೌಡ, ಚಂದ್ರೆಗೌಡ, ರಾಜಗೋಪಾಲ, ಕುಮಾರಯ್ಯ, ಬಸವರಾಜ್, ಚಂದ್ರಶೇಖರ್, ಲೋಕೇಶ್ ಮುಂತಾಧವರು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಒತ್ತಡದ ಜೀವನದ ಸಂದರ್ಭದಲ್ಲಿ ಮಾನಸಿಕವಾಗಿ ನೆಮ್ಮದಿ ಕಾಣಲು ದೇವಾಲಯಗಳು ಸಹಕಾರಿ: ಶಾಸಕ ಎಂ.ಪಿ.ಕುಮಾರಸ್ವಾಮಿ.










