ಮೂಡಿಗೆರೆ : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮೂಡಿಗೆರೆ ಘಟಕ ವತಿಯಿಂದ ಟೆನ್ನೀಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ…

952
firstsuddi

ಮೂಡಿಗೆರೆ : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮೂಡಿಗೆರೆ ಘಟಕ ವತಿಯಿಂದ ಟೆನ್ನೀಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಇಂದು ಆಯೋಜಿಸಲಾಗಿತ್ತು. ತಾಲ್ಲೂಕಿನ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾ ಗೋ ರಕ್ಷಕಾ ಪ್ರಮುಖ್ ಅವಿನಾಶ್ ಹಾಗೂ ಬಿಜೆಪಿ ಮುಖಂಡರಾದ ಸಂಜಯ್ ಕೊಟ್ಟಿಗೆಹಾರ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದರು. ಪಂದ್ಯಾವಳಿಯಲ್ಲಿ ತಾಲ್ಲೂಕು ಎ.ಬಿ.ವಿ.ಪಿ ಘಟಕ, ಗೋಣಿಬೀಡು ಬಜರಂಗದಳ, ಕೊಟ್ಟಿಗೆಹಾರ ಶ್ರೀರಾಮ ಸೇನೆ ಹಾಗೂ ಬಜರಂಗದಳದ ಹಿರಿಯರ ತಂಡಗಳು ಪಾಲ್ಗೊಂಡು ರೋಚಕ ಪ್ರದರ್ಶನ ನೀಡಿದರು.

ತಾಲ್ಲೂಕು ಎ.ಬಿ.ವಿ.ಪಿ ತಂಡ ಪ್ರಥಮ ಹಾಗೂ ಗೋಣಿಬೀಡು ಬಜರಂಗದಳ ತಂಡ ದ್ವಿತೀಯ ಸ್ಥಾನ ಗಳಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕಣಚೂರು ವಿನೋದ್, ತರುವೆ ಆದರ್ಶ್, ಪ್ರಕಾಶ್ ಪೂಜಾರಿ, ಪ್ರವೀಣ್ ಪೂಜಾರಿ ಹಾಗೂ ತಾಲ್ಲೂಕು ಬಜರಂಗದಳ ಸಂಚಾಲಕಾರದ ವಿನಯ್ ಶೆಟ್ಟಿ, ಹಾಗೂ ದೀಕ್ಷಿತ್ ಇನ್ನಿತರರು ಭಾಗಿಯಾಗಿದ್ದರು.