ಕೋಲಾರ : ಪ್ರಿಯತಮನೊಬ್ಬ ಸಿನಿಮೀಯ ಶೈಲಿಯಲ್ಲಿ ತನ್ನ ಪ್ರಿಯತಮೆಯನ್ನು ಅಪಹರಿಸಿರುವ ಘಟನೆ ನಗರದ ದೇವಾಂಗಪೇಟೆಯಲ್ಲಿರುವ ರೆಡ್ಡಿ ಎಲೆಕ್ಟ್ರಿಕಲ್ ಬಳಿ ನಡೆದಿದೆ. ಕೋಲಾರ ನಗರದ ಕಿಲಾರಿಪೇಟೆಯ ಶಿವ ಎಂಬ ಯುವಕ ಯುವತಿಯನ್ನು ಅಪಹರಿಸಿದ್ದಾನೆ. ಯುವಕ ಶಿವ ಹಾಗೂ ದೇವಾಂಗಪೇಟೆಯ ಸಿರಿಷಾ ಎಂಬ ಯುವತಿ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಯನ್ನು ಯುವತಿಯ ಪೋಷಕರು ನಿರಾಕರಿಸಿ ಯುವತಿಗೆ ಬೇರೆ ಮದುವೆ ಮಾಡಲು ಮುಂದಾಗಿದ್ದರು. ಈ ವಿಷಯ ತಿಳಿದ ಯುವಕ ಸಂಚು ರೂಪಿಸಿ ಇಂದು ಮಧ್ಯಾಹ್ನ 12 ಗಮಟೆ ಸಮಯದಲ್ಲಿ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಬಂದು ಸಿನಿಮೀಯಾ ಶೈಲಿಯಲ್ಲಿ ಯುವತಿಯನ್ನು ಅಪಹರಿಸಿದ್ದಾನೆ. ಯುವಕ ಯುವತಿಯನ್ನು ಅಪಹರಿಸುತ್ತಿರುವ ದೃಶ್ಯ ರೆಡ್ಡಿ ಎಲೆಕ್ಟ್ರಿಕ್ ಬಳಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗಲ್ ಪೇಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.










