ಮೂಡಿಗೆರೆ : 2018 ರ ಚುನಾವಣೆಯಲ್ಲಿ ಮೂಡಿಗೆರೆಯಲ್ಲಿ ಜೆಡಿಎಸ್ ಗೆ ಗೆಲುವು ಸಿಗಲಿದ್ದು, ರಾಜ್ಯದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲಿದ್ದಾರೆಂದು ಜೆಡಿಎಸ್ ಯುವ ಮುಖಂಡ ಆದರ್ಶ್ ಬಾಳೂರು ತಿಳಿಸಿದರು. ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಅವರು, ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಆಂತರರಿಕ ಜಗಳ ಹೆಚ್ಚಾಗಿದ್ದು, ಎರಡೂ ರಾಜಕೀಯ ಪಕ್ಷಗಳು ಗೊಂದಲದಲ್ಲಿದ್ದಾರೆ. ಆದರೆ ಜೆಡಿಎಸ್ ನಲ್ಲಿ ಯಾವುದೇ ಆಂತರಿಕ ಗೊಂದಲಗಳಿಲ್ಲದೇ ಸಧೃಡವಾಗಿದ್ದು, ಜನರು ನಮ್ಮ ಕೈಹಿಡಿಯಲಿದ್ದಾರೆಂಬ ಸಂಪೂರ್ಣ ವಿಶ್ವಾನ ನನಗಿದೆ ಎಂದರು.
ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ಉದ್ದವಿದ್ದು, ಯಾರಿಗೆ ಟಿಕೇಟ್ ಸಿಗಲಿದೆ ಎಂಬುದು ಆಯಾ ಪಕ್ಷದ ಆಕಾಂಕ್ಷಿಗಳಿಗೇ ತಿಳಿದಿಲ್ಲ. ಜೆಡಿಎಸ್ ನಲ್ಲಿ ಈಗಾಗಲೇ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯೋದು ಬಿ.ಬಿ. ನಿಂಗಯ್ಯನವರೇ ಅಂತಾ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಅಲ್ಲದೇ ಹಾಲಿ ಶಾಸಕರಾಗಿರುವ ಬಿ.ಬಿ. ನಿಂಗಯ್ಯನವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. 650 ಕೋಟಿ ರೂ. ಹೆಚ್ಚು ಅನುದಾನವನ್ನು ಕ್ಷೇತ್ರಕ್ಕೆ ತಂದು ಕೆಲಸ ಮಾಡಿಸಿದ್ದಾರೆ. ಶಾಸಕರ ಅಭಿವೃದ್ಧಿಯೇ ನಮ್ಮ ಶಾಸಕರನ್ನು ಗೆಲ್ಲಿಸುತ್ತದೆ ಎಂದರು.
ಅಲ್ಲದೇ ರಂಜನ್ ಅಜಿತ್ ಕುಮಾರ್ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿರೋದು ಕೂಡಾ ಮೂಡಿಗೆರೆಯಲ್ಲಿ ನಿಂಗಯ್ಯನವರು ಗೆಲ್ಲೋದಕ್ಕೆ ವರದಾನವಾಗಲಿದೆ. ಯಾವಾಗಲೂ ಕ್ಷೇತ್ರದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ನಿಂಗಯ್ಯನವರು ಜನರಿಗೆ ಹತ್ತಿರವಾಗಿದ್ದಾರೆಂದು ಆದರ್ಶ್ ಬಾಳೂರು ತಿಳಿಸಿದರು.