ಕೊಪ್ಪ – ಬಸ್ತಿ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಇಂದು ಪತ್ತೆಯಾಗಿದ್ದು, ಇದೇ ತಿಂಗಳ 11ನೇ ತಾರೀಖಿನಂದು ಶೃಂಗೇರಿ ತಾಲೂಕಿನ ಮೇಗೂರು ನಿವಾಸ್ ಅಶೋಕ್ ಕೊಗ್ರೆ ಗ್ರಾಮಕ್ಕೆ ಹೋಗುವಾಗ ಬಸ್ತಿಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ. ಎರಡು ದಿನಗಳ ಬಳಿಕ ಅಶೋಕ್ ಬೈಕ್ ಕೂಡ ಅದೇ ಹಳ್ಳದಲ್ಲಿ ಪತ್ತೆಯಾಗಿತ್ತು. ಶವಕ್ಕಾಗಿ ಸ್ಥಳಿಯರು ಕಳೆದ ಒಂಬತ್ತು ದಿನಗಳಿಂದ ಶೋಧಿಸುತ್ತಿದ್ದು. ಎರಡು ದಿನಗಳ ಬಳಿಕ ಎನ್.ಡಿ.ಆರ್.ಎಫ್ ತಂಡ ಕೂಡ ಬಂದಿತ್ತು. ಮೂರು ದಿನ ಶವಕ್ಕಾಗಿ ಶೋಧ ನಡೆಸಿದ ಅವರು ನೀರಿನ ರಭಸ ಕಂಡು ವಾಪಸ್ಸಾಗಿದ್ರು. ಜಿಲ್ಲಾಡಳಿತ ಕೂಡ ಯಾವುದೇ ಸಹಕಾರ ನೀಡಿಲ್ಲ ಎಂದು ಸ್ಥಳಿಯರು ಜಿಲ್ಲಾಡಳಿತದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದು. ಅಂದಿನಿಂದ ಸ್ಥಳಿಯರೇ ಚಂದಾ ಎತ್ತಿ ಖಾಸಗಿ ಈಜು ಪಟುಗಳನ್ನು ಕರೆಸಿ ಮೃತದೇಹಕ್ಕಾಗಿ ಹುಡುಕಾಟ ನಡೆಸ್ತಿದ್ದು, ಇಂದು ಬಸ್ತಿ ಹಳ್ಳದಿಂದ 10 ಕಿ.ಮೀ. ದೂರದಲ್ಲಿ ಭದ್ರಾ ಗೇಟ್ ಬಳಿ ಮೃತದೇಹ ಪತ್ತೆಯಾಗಿದೆ.
Home ನಮ್ಮ ಮಲ್ನಾಡ್ ಕಳೆದ ಒಂಬತ್ತು ದಿನಗಳ ಹಿಂದೆ ಕೊಪ್ಪದ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ.