ಚಿಕ್ಕಮಗಳೂರಿನಲ್ಲಿ ಆಟೋ ಹಿಂಬದಿ ಎಸ್.ಪಿ ಅಣ್ಣಾಮಲೈ ಅವರ ಭಾವಚಿತ್ರ ಹಾಕಿಕೊಂಡ ಅಭಿಮಾನಿ.

839

ಚಿಕ್ಕಮಗಳೂರು- ಸಿನಿಮಾ ಸ್ಟಾರ್ ಗಳು, ಕ್ರಿಕೆಟ್ ಪ್ಲೇಯರ್ಸ್ಗಳು, ರಾಜಕಾರಣಿಗಳಿಗೆ ಅಭಿಮಾನಿಗಳಿರುವಂತೆ, ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈಗೂ ಅಭಿಮಾನಿಗಳು ಹುಟ್ಕೊಂಡಿದ್ದಾರೆ. ಜನ ತಮ್ಮ ನೆಚ್ಚಿನ ನಾಯಕರ ಭಾವಚಿತ್ರವನ್ನು ಆಟೋ, ಬೈಕ್, ಕಾರುಗಳ ಮೇಲೆ ಹಾಕಿಕೊಳ್ಳುವಂತೆ ಕಾಫಿನಾಡಿನ ಅಣ್ಣಾಮಲೈ ಅಭಿಮಾನಿಗಳು ತಮ್ಮ ಹೀರೋವಿನ ಫೋಟೋವನ್ನ ಆಟೋಗಳ ಮೇಲೆ ಹಾಕ್ಕೊಂಡಿದ್ದಾರೆ. ಆಟೋ ಚಾಲಕನೊಬ್ಬ ತನ್ನ ಆಟೋ ಹಿಂಬದಿ ಅಣ್ಣಾಮಲೈ ಭಾವಚಿತ್ರದ ಕೆಳಗೆ ಅಭಿಮಾನಿ ಎಂದು ಹಾಕಿಕೊಂಡು, ಮತ್ತೊಂದು ಬದಿ ಅಬ್ದುಲ್ ಕಲಾಂ ಭಾವಚಿತ್ರದ ಕೆಳಗೆ ಸ್ವಾಭಿಮಾನಿ ಅಂತ ಬರೆದುಕೊಂಡಿದ್ದಾನೆ. ಜನಸಾಮಾನ್ಯರು ಎಲ್ಲರ ಫೋಟೋವನ್ನೂ ಹೀಗೆ ಹಾಕಿಕೊಳ್ಳುವುದಿಲ್ಲ. ಜನರ ಮಾನಸ್ಸಿನಲ್ಲಿ ಉಳಿದವರ ಫೋಟೋವನ್ನು ಮಾತ್ರ ಹಾಕಿಕೊಳ್ಳೋದು. ಕಾಫಿನಾಡಿನ ಆಟೋ ರಾಜರಿಗೆ ಅಣ್ಣಾಮಲೈ ಕೂಡ ಜನರ ಮಾನಸ್ಸಿನಲ್ಲಿ ಉಳಿದ ವ್ಯಕ್ತಿಯಾಗಿದ್ದಾರೆ. ಕಾಫಿನಾಡಿಗೆ ನೂರಾರು ಎಸ್ಪಿಗಳು ಬಂದೋಗಿದ್ದಾರೆ. ಆದ್ರೆ, ಎಲ್ಲರನ್ನೂ ಗೌರವಿಸಿರೋ ಮಲೆನಾಡಿಗರು ಅಣ್ಣಾಮಲೈರನ್ನ ಪ್ರೀತಿಸಿದ್ದಾರೆ. ಆ ಮನದಾಳದ ಪ್ರೀತಿಯೇ ಈಗ ಆಟೋಗಳ ಮೇಲೆ ಅವರ ಭಾವಚಿತ್ರ ಹಾಕಿಕೊಳ್ಳುವಂತೆ ಮಾಡಿದೆ. ಐಪಿಎಸ್ ಆಫೀಸರ್ ಆದ್ರು ಕೂಡ ಅಹಂಕಾರವಿಲ್ಲದ ಅಣ್ಣಾಮಲೈರ ಸರಳತೆ ಮಲೆನಾಡಿಗರನ್ನ ಮಂತ್ರಮುಗ್ಧರನ್ನಾಗಿಸಿರೋದ್ರಲ್ಲಿ ಅನುಮಾನವಿಲ್ಲ.