ಗಣೇಶ ವಿಸರ್ಜನೆ ವೇಳೆ ಕೆರೆಗೆ ಬಿದ್ದು ಬಾಲಕ ದುರ್ಮರಣ…

306
firstsuddi

ಮಡಿಕೇರಿ :ಗಣೇಶ ವಿಸರ್ಜನೆಗೆ ತೆರಳಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕುಶಾಲನಗರದ ಸಿದ್ಧಲಿಂಗಪುರದ ಅರಶಿನಕುಪ್ಪೆಯಲ್ಲಿ ನಡೆದಿದ್ದು, ಅನಂತಕುಮಾರ್ ಹಾಗೂ ಪದ್ಮ ದಂಪತಿಯ ಎರಡನೇ ಪುತ್ರ ಹೇಮಂತ್ (13) ಮೃತ ಬಾಲಕ. ಗುರುವಾರ ಮಧ್ಯಾಹ್ನ 12 ಜನ ಬಾಲಕರ ತಂಡವು ಗಣಪತಿ ವಿಸರ್ಜನೆಗೆ ಕೆರೆಗೆ ತೆರಳಿದ್ದರು. ವಿಸರ್ಜನೆ ವೇಳೆ ಹೇಮಂತ್ ನೀರು ಪಾಲಾಗಿದ್ದಾನೆ. ಈ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.