ಕ್ರೇನ್ ಗೆ ಕಾರು ಡಿಕ್ಕಿ, ಸ್ಥಳದಲ್ಲೇ ನಾಲ್ವರ ಸಾವು…

298
firstsuddi

ತುಮಕೂರು:  ಕೆಟ್ಟು ನಿಂತಿದ್ದ ಲಾರಿ ತೆರವುಗೊಳಿಸಲು ಬಂದಿದ್ದ ಕ್ರೇನ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದ್ದಲೇ ಮೃತ ಪಟ್ಟಿರುವ  ಘಟನೆ ಶಿರಾ ತಾಲೂಕಿನ ಕರಜೀವನಹಳ್ಳಿ ಬಳಿ ನಡೆದಿದೆ.
ಕೆಟ್ಟು ನಿಂತಿದ್ದ ಲಾರಿ ತೆರವುಗೊಳಿಸುವ ವೇಳೆ ವೇಗವಾಗಿ ಬಂದ ಕಾರು ಕ್ರೇನ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದ್ದಲೇ ಮೃತ ಪಟ್ಟಿದ್ದಾರೆ. ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನಿಂದ ಕಾರು ಶಿರಾ ಕಡೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಕಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ