ಕೊಪ್ಪಳ – ಐದು ವರ್ಷ ಸಮ್ಮಿ ಶ್ರ ಸರ್ಕಾರವನ್ನು ನಡೆಸುತ್ತೇವೆ. ಸಮ್ಮಿ ಶ್ರ ಸರ್ಕಾರ ರಚನೆ ಮಾಡುವ ವೇಳೆ ಐದು ವರ್ಷ ಸರ್ಕಾರ ನಡೆಸುವಂತೆ ಒಪ್ಪಂದ ಮಾಡಿಕೊಂಡಿದ್ದು, .ಸರ್ಕಾರವನ್ನು ಬಿಳಿಸುವ ಉದ್ದೇಶದಿಂದ ಕೆಲವರು ಈ ಸರ್ಕಾರದ ಅವಧಿ ಎರಡು ವರ್ಷ, ಒಂದು ವರ್ಷ, ಆರು ತಿಂಗಳು ಅಂತಾರೆ. ಹೊರಗಡೆ ಯಾರೇ ಏನೇ ಹೇಳಿಕೆ ನೀಡಿದರೂ ಅದು ಅಪ್ರಸ್ತುತ. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುತ್ತದೆ ಎಂದು ಮತ್ತೊಮ್ಮೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ’ ಎಂದು ಕೊಂಚ ಗರಂ ಆಗಿಯೇ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
 
            
 
		








