ಲಂಚವನ್ನು ಕೋಡೋದು ತಪ್ಪು ಹಾಗೇ ತೆಗೆದುಕೊಳ್ಳುವುದು ತಪ್ಪು- ಎನ್ ಎಸ್ ಶೃತಿ ಪೊಲೀಸ್ ಅಧೀಕ್ಷಕರು…

497
firstsuddi

ಮೂಡಿಗೆರೆ- ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಚಿಕ್ಕಮಗಳೂರು ಠಾಣಾ ವತಿಯಿಂದ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಪಶ್ಚಿಮ ವಲಯ ಪೊಲೀಸ್ ಅಧೀಕ್ಷಕರದ ಎನ್. ಎಸ್. ಶೃತಿ ಅವರು  ಸಾರ್ವಜನಿಕರಿಗೆ ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯವೈಖರಿ ಬಗ್ಗೆ ಹಾಗೂ ಸರ್ಕಾರಿ ಕಛೇರಿಯಲ್ಲಿ ಲಂಚ ಕೇಳುವ ಅಧಿಕಾರಿಗಳ ಬಗ್ಗೆ ದೂರು ಹೇಗೆ ನೀಡಬೇಕು ಎಂದು ಮಾಹಿತಿ ನೀಡಿದರು  ಹಾಗೂ ಲಂಚವನ್ನು ಕೋಡೋದು ತಪ್ಪು ಹಾಗೇ ತೆಗೆದುಕೊಳ್ಳುವುದು ತಪ್ಪು ಸರ್ಕಾರ ಅಧಿಕಾರಿಗಳಿಗೆ ಸಂಬಳ ನೀಡುತ್ತದೆ ನೀವೇಕೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕು ಯಾರಾದರು ನಿಮಗೆ ಲಂಚ ಕೊಡುವಂತೆ ಕಿರಿಕುಳ ಕೊಡುತ್ತಿದ್ದರೆ, ಕೆಲಸದಲ್ಲಿ ವಿಳಂಬ ಮಾಡುತ್ತಿದ್ದರೆ ನಮ್ಮ ಠಾಣೆಗೆ ದೂರು ಕೊಡಿ ನಿಮ್ಮೊಂದಿಗೆ ನಾವು ಇದ್ದೇವೆ ಎಂದು  ತಿಳಿಸಿದರು . ರೈತ ಸಂಘದ ಮುಖಂಡರು ಸೇರಿದಂತೆ ಹಲವು ರೈತರು ಸರ್ಕಾರಿ ಕಛೇರಿಯಲ್ಲಿ ನಡೆಯುತ್ತಿರುವ ಲಂಚದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು. ಹಾಗೂ ಕೆಲವು ಅಧಿಕಾರಿಗಳಿಂದ ನೊಂದ ರೈತರು ಮನವಿ ಸಲ್ಲಿಸಿದರು.ಮೂಡಿಗೆರೆ ಪಟ್ಟಣ ಪಂಚಾಯಿತಿ ಹಾಗೂ ಸರ್ವೇ ಅಧಿಕಾರಿಗಳು ಲಂಚ ಇಲ್ಲದೇ ಕೆಲಸ ಮಾಡುವುದಿಲ್ಲ ಎಂದು ಸಾರ್ವಜನಿಕರು ದೂರು ನೀಡಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಉಪ ಅಧೀಕ್ಷಕರಾದ ನಾಗೇಶ್ ಶೆಟ್ಟಿ ,ಇನ್ ಸ್ಪೆಕ್ಟರ್ ಗಳಾದ ಬ್ರೀಜೇಶ್ ಮ್ಯಾಥ್ಯ್ ಹಾಗೂ ಕೃಷ್ಣಮೂರ್ತಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.