ಬ್ಲಾಕ್ ಮೇಲ್ ಗೆ ಹೆದರಿ ವಿಷ ಸೇವಿಸಿದ ಪ್ರೇಮಿಗಳ ಸಾವು…

284
firstsuddi

ಶಿವಮೊಗ್ಗ:  ಪ್ರೇಮಿಗಳಿಬ್ಬರು ಒಟ್ಟಿಗೆ ಇದ್ದ ವಿಡಿಯೋ ಇಟ್ಟುಕೊಂಡು ಕಿಡಿಗೇಡಿಗಳು ಬ್ಲಾಕ್ ​ಮೇಲ್  ಮಾಡಿದ್ದು, ಬೇಸತ್ತ ಪ್ರೇಮಿಗಳು  ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿ  ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಹೊಸೂರು ಮಟ್ಟಿಯ ನಿವಾಸಿ ಸಂಜಯ್ ಕಳೆದ ಒಂದು ವರ್ಷದಿಂದ ರಾಗಿ ಹೊಸಹಳ್ಳಿಯ ಯುವತಿ ಆಪ್ರಾಪ್ತೆ ಕೀರ್ತನಾ (17)ಪ್ರೀತಿಸುತ್ತಿದ್ದರು.  ಪ್ರೇಮಿಗಳಿಬ್ಬರು ಏಕಾಂತದಲ್ಲಿದ್ದಾಗ  ಕೆಲ ಯುವಕರು ವಿಡಿಯೋ ಮಾಡಿದ್ದಾರೆ. ನಂತರ ಆ ಯುವಕರು  ಸಂಜಯ್ ಗೆ  ಪದೇ ಪದೇ ಫೋನ್ ಮಾಡಿ 5 ಲಕ್ಷ ಹಣ ಕೊಡುವಂತೆ  ಡಿಮ್ಯಾಂಡ್​ ಮಾಡಿದ್ದಾರೆ. ಹಾಗೂ ಹಣವನ್ನು  ಕೊಡದಿದ್ದರೆ  ವಿಡೀಯೋವನ್ನು  ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್​ ಮೇಲ್​ ಮಾಡಿದ್ದಾರೆ. ಕಿಡಿಗೇಡಿಗಳಿಗೆ ಹಣ ನೀಡಲಾಗದೇ ಇಬ್ಬರು ಪ್ರೇಮಿಗಳು  ಸೋಮವಾರ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.ಇದನ್ನು ನೋಡಿದ ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ   ಚಿಕಿತ್ಸೆ ಫಲಕಾರಿಯಾಗದೇ ನವೆಂಬರ್ 21 ರಂದು ಯುವಕ ಮೃತಪಟ್ಟಿದ್ದು,ಗಂಭೀರ ಸ್ಥಿತಿಯಲ್ಲಿದ್ದ  ಕೀರ್ತನಾ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ.ಕುಂಸಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು  ಆರೋಪಿಗಳನ್ನು  ಬಂಧಿಸಿದ್ದಾರೆ. ಪ್ರಕರಣ ಗಂಭೀರವಾಗಿರುವುದರಿಂದ ಆಯನೂರು ಮಂಡಘಟ್ಟದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.