ಶಿಕ್ಷಣ ಇಲಾಖೆ ಎಡವಟ್ಟಿಗೆ ಬೀದಿಗೆ ಬಿದ್ದ ದರ್ಜಿಗಳು…

424

ರಾಜ್ಯದಲ್ಲೇ ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರ ಪ್ರಕರಣ ಬೃಹತ್ ಹಗರಣಕ್ಕೆ ನಾಂದಿ ಹಾಡತೊಡಗಿದ್ದು ಇಡೀ ರಾಜ್ಯವ್ಯಾಪಿ ಕೊಟ್ಯಾಂತರ ಸಿದ್ಧ ಉಡುಪುಗಳು ನಿರುಪಯುಕ್ತವಾಗುವ ಭೀತಿ ಎದುರಾಗಿದ್ದು ಸಾವಿರಾರು ಟೈಲರ್ ವೃತ್ತಿ ಮಾಡುವ ಜನರು ಅಕ್ಷರಶ: ಬೀದಿಗೆ ಬೀಳುವ ಜೊತೆಗೆ ರೈತರ ಮಾದರಿಯಲ್ಲಿ ಸಾಲಭಾದೆ ಎದುರಿಸುವಂತಾಗಿದೆ.ಸರ್ಕಾರಿ ಶಾಲೆಗಳು ಪುನರಾರಂಭಗೊಂಡು 15 ದಿನಗಳೇ ಕಳೆದಿವೆ. ಆದರೆ ರಾಜ್ಯದಲ್ಲಿ ಇನ್ನು ಸಹ ಶಾಲೆಗಳಲ್ಲಿ ಸಮವಸ್ತ್ರಗಳನ್ನು ವಿತರಣೆ ಮಾಡಿಲ್ಲ. ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ಇಡೀ ರಾಜ್ಯದಲ್ಲೇ ಶಾಲಾ ಸಮವಸ್ತ್ರ ಖರೀದಿಯ ಗೋಲ್ ಮಾಲ್ ನಡೆಯುವ ಮುನ್ಸುಚನೆ ಗೋಚರಿಸುತ್ತಿದೆ. ಇಡೀ ರಾಜ್ಯದಲ್ಲಿ ಪ್ರತಿ ಶಾಲೆ ಹಾಗೂ ಎಸ್ ಡಿ ಎಂ ಸಿ ಸ್ಥಳೀಯವಾಗಿಯೇ ಸಮವಸ್ತ್ರ ಖರೀದಿ ಮಾಡುತ್ತಿತ್ತು ಆದರೆ ಈ ಭಾರೀ ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆಯುವ ಮೂಲಕ ಶಿಕ್ಷಣ ಇಲಾಖೆ ಇಡೀ ವ್ಯವಸ್ಥೆ ಯನ್ನು ಬುಡಮೇಲು ಮಾಡಲು ಮುಂದಾಗಿದೆ. ಇದರಿಂದ ಸ್ಥಳೀಯವಾಗಿ ಸಮವಸ್ತ್ರ ಹೊಲೆದು ಕೊಡುತ್ತಿದ್ದ ಸಾವಿರಾರು ಟೈಲರ್ ಗಳು ಬೀದಿಗೆ ಬೀಳುವಂತಾಗಿದೆ. ಅವರು ಹೊಲೆದ ಕೊಟ್ಯಾಂತರ ಮೌಲ್ಯದ ಶಾಲಾ ಸಮವಸ್ತ್ರಗಳನ್ನು ಕೊಳ್ಳದೇ ಸರ್ಕಾರ ಹಿಂದೇಟು ಹಾಕುತ್ತಿರುವುದು ಈಗಾಗಲೇ ಯೂನಿಫಾರಂ ತಯಾರಿಸಿ ಇಟ್ಟುಕೊಂಡಿದ್ದ ದರ್ಜಿಗಳ ಪಾಡು ಬೀದಿಗೆ ಬಿದ್ದಂತಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳಿಗೆ ಆಯಾ ಶಾಲಾ ಮುಖ್ಯಸ್ಥರು ಸ್ಥಳೀಯವಾಗಿಯೇ ಕಳೆದ ಐದಾರು ವರ್ಷಗಳಿಂದ ಟೈಲರ್ ಗಳಿಗೆ ತಮ್ಮ ಶಾಲೆಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸಮವಸ್ತ್ರಗಳನ್ನು ಹೊಲೆದು ಕೊಡುವಂತೆ ಒಪ್ಪಂದ ಮಾಡಿಕೊಂಡಿದ್ದರು. ಅದೇ ರೀತಿ ಕಡೂರು ತಾಲೂಕಿನ ಚಟ್ನಹಳ್ಳಿ ಸುತ್ತಾಮುತ್ತಾ ನೂರಾರು ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಜನಾರ್ಧನ್ ಸಾವಿರಾರು ಜೊತೆ ಯೂನಿಫಾರಂ ಹೊಲೆದು ಸಿದ್ದಪಡಿಸಿಕೊಂಡಿದ್ದಾರೆ. ಆದರೆ ಈಗ ಅವುಗಳನ್ನು ಶಾಲೆಗಳು ಕೊಳ್ಳಲು ಮುಂದಾಗದಿರುವುದರಿಂದ ದರ್ಜಿಗಳು ಅತಂತ್ರರಾಗಿದ್ದಾರೆ.ಅಲ್ಲದೇ ದರ್ಜಿಗಳನ್ನು ಇಷ್ಟೊಂದು ಪ್ರಮಾಣದ ಬಟ್ಟೆ ಹೊಲೆಯಲು ಅವರ ಜೊತೆ ಕೈ ಜೋಡಿಸಿದ ಮಹಿಳಾ ಸಿಬ್ಬಂದಿಗಳು ಕೆಲಸ ಕಳೆದುಕೊಳ್ಳುವಂತಾಗಿದೆ. ಸ್ವಯಂ ಉದ್ಯೋಗದ ರೀತಿಯಲ್ಲ ಮನೆಯಲ್ಲೇ ಬಟ್ಟೆ ಹೊಲಿದು ಕೊಡುತ್ತಿದ್ದ ಮಹಿಳೆಯರು ಇದೀಗ ಕೆಲಸ ಕಳೆದುಕೊಳ್ಳುವಂತಾಗಿದೆ.