ಎತ್ತಿನಹೊಳೆ ಯೋಜನೆ 2020ಕ್ಕೆ ಪೂರ್ಣಗೊಳ್ಳುವ ವಿಶ್ವಾಸ – ಕೆ.ಆರ್ ರಮೇಶ್ ಕುಮಾರ್.

420
firstsuddi

ಹಾಸನ– ಎತ್ತಿನಹೊಳೆ ಯೋಜನೆ 2020ಕ್ಕೆ ಪೂರ್ಣಗೊಳ್ಳಲಿದ್ದು, ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ. ಎಂದು ತಾಲೂಕಿನ ಎತ್ತಿನಹೊಳೆ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿದ ವಿಧಾನ ಸಭಾಧ್ಯಕ್ಷ ಕೆ.ಆರ್ ರಮೇಶ್‍ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎತ್ತಿನಹೊಳೆ ಯೋಜನೆ ನಿಗದಿತ ಅವಧಿಯಲ್ಲಿ ಕೆಲವೊಂದು ತೊಡಕುಗಳಿಂದ ಕಾಮಗಾರಿ ನಿಧಾನಗತಿಯಿಂದ ಸಾಗಿದ್ದು, ಈಗಾಗಲೇ ಮೊದಲನೆ ಹಂತದ ಕುಂಬರಡಿ ಎಸ್ಟೇಟ್ ನ ಕಾಮಗಾರಿ ಶೇ 70ರಷ್ಟು ಕೆಲಸವಾಗಿದ್ದು, ಇಲ್ಲಿಂದ ಬಿಳಿಗುಡ್ಲ ಜಲಶಯಕ್ಕೆ ಹರಿಸುವ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಈ ಯೋಜನೆಯಲ್ಲಿ ಪರಿಹಾರ ವಿತರಿಸಲು ಚುನಾವಣೆಯಿಂದ ಅಡ್ಡಿಯಾಗಿತ್ತು. ಇನ್ನೂ ಮೂರು ತಿಂಗಳಲ್ಲಿ ಪರಿಹಾರ ಕೊಡುವ ಕೆಲಸ ಪೂರ್ಣವಾಗುತ್ತದೆ. ಹಾಗೂ ಈ ಯೋಜನೆ ಮೂಲಕ 120ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಲಹೆ, ದೂರುಗಳ ಬಗ್ಗೆ ಪ್ರತಿ ತಿಂಗಳು ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ.ಎಂದು ರಮೇಶ್ ಕುಮಾರ್ ತಿಳಿಸಿದರು.