ಮನೆ ಮಾಳಿಗೆ ಕುಸಿದು ತಾಯಿ, ಮೂವರು ಮಕ್ಕಳ ದುರ್ಮರಣ…

235
firstsuddi

ಚಿತ್ರದುರ್ಗ: ಮನೆಯ ಮಾಳಿಗೆ ಕುಸಿದು ತಾಯಿ ಮತ್ತು ಮೂವರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ನಡೆದಿದೆ.ನಾಗರತ್ನಮ್ಮ (30), ಮಕ್ಕಳಾದ ಕೋಮಲ (2), ತೀರ್ಥವರ್ಧನ(4) ಮತ್ತು ಯಶಸ್ವಿನಿ(5) ಮೃತಪಟ್ಟ ದುರ್ದೈವಿಗಳು ಎನ್ನಲಾಗಿದ್ದು, ಚಂದ್ರಶೇಖರ್ ಹಾಗೂ ದೇವಿಕಾ ಎಂಬವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.