ಮೂಡಿಗೆರೆ: ಕಾಲು ಜಾರಿ ಕೆರೆಗೆ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ತಾಲೂಕಿನ ಗೋಣಿಬೀಡು ಗ್ರಾಮದ ಚಂದ್ರಾಪುರ ಕೆರೆಯಲ್ಲಿ ನಡೆದಿದೆ. ವಿಶ್ವಜಿತ್ (15) ಮೃತ ದುರ್ದೈವಿ. ವಿಶ್ವಜಿತ್ ನಾಯಿ ತೊಳೆಯುವಾಗ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದ್ದು ,ಗೋಣಿಬೀಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.










