ನವದೆಹಲಿ- ಮಹದಾಯಿ ಅಂತಿಮ ತೀರ್ಪಿಗೆ ಸಂಬಂಧಿಸಿದಂತೆ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರು ಮಹದಾಯಿ ವಿಚಾರವಾಗಿ ಸುಪ್ರೀಂ ಬಳಿ ಗೋವಾದವರು ಹೋದರೆ ನಾವು ಸುಮ್ಮನೇ ಕೂರೋದಿಲ್ಲ.ಇಷ್ಟು ದಿನ ಹೋರಾಟ ಮಾಡಿದ ರೈತರು ಸಂತೋಷದಿಂದ ಇದ್ದಾರೆ. ಮಹದಾಯಿ ಭಾಗದ ಜನರು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ನಾನಿನ್ನೂ ತೀರ್ಪಿನ ಪ್ರತಿಯನ್ನು ಓದಿಲ್ಲ. ಪ್ರತಿಯನ್ನು ಅಧ್ಯಯನ ಮಾಡಿದ ಬಳಿಕ ಎಲ್ಲಿ ಸಮಸ್ಯೆ ಇದೆ? ಮುಂದೆ ಏನು ಮಾಡಬೇಕು? ಎಂದು ತಿರ್ಮಾನಿಸಿ ರಾಜ್ಯ ಸರ್ಕಾರದ ಜೊತೆಯಲ್ಲಿ ಚರ್ಚಿಸುತ್ತೇನೆ ಎಂದು ದೆಹಲಿಯಲ್ಲಿ ತಿಳಿಸಿದ್ಧಾರೆ.