ರಂಜಾನ್ ಹಬ್ಬ ಆಚರಿಸಬೇಕಾದ ಕುಟುಂಬದಲ್ಲಿ ದುಃಖದ ಮಡು, ಸಂಭ್ರಮ ಪಡಬೇಕಾದ ನವ ದಂಪತಿಗಳ ಮೇಲೆ ಜವರಾಯನ ಅಟ್ಟಹಾಸ.!

1226
  • ತನು,ಕೊಟ್ಟಿಗೆಹಾರ

ಬಣಕಲ್ಇನ್ನೇನು ರಂಜಾನ್ ಹಬ್ಬಕ್ಕೆ ಮೂರು ನಾಲ್ಕು ದಿನ ಇದೆ ಎಂದಾಗ ಹಬ್ಬದ ಸಂಭ್ರಮ ಮುಸ್ಲಿಂ ಕುಟುಂಬದಲ್ಲಿ ಮೂಡುವುದು ಸಹಜ.ಅದಕ್ಕಾಗಿಯೇ ಹಬ್ಬದ ಸಂಭ್ರಮದಲ್ಲಿ ನವ ದಂಪತಿಗಳಿಬ್ಬರು ಉಡುಪಿಯ ಕಾಪುವಿನಿಂದ ಮಂಗಳೂರಿಗೆ ವಿವಿಧ ವಸ್ತುಗಳ ಖರೀದಿಗಾಗಿ ಆಗಮಿಸಿ ನೂತನ ದಂಪತಿಗಳ ಇಚ್ಚಯೆಯಂತೆ ಖರೀದಿ ನಡೆದು ಮನೆಗೆ ವಾಪಾಸ್ ತೆರಳುತ್ತಿದ್ದರು.ಹಬ್ಬದ ಸಿದ್ದತೆಯ ನಡುವೆ ನವ ದಂಪತಿಗಳ ಮೇಲೆ ಜವರಾಯ ಅಟ್ಟಹಾಸ ಮೆರೆದು ರಂಜಾನ್ ಆಚರಿಸಬೇಕಾದ ಕುಟುಂಬದಲ್ಲಿ ಶೋಕದ ಛಾಯೆ ಮೊಳಗಿದೆ.ಎರಡೂ ಕುಟುಂಬ ದುಃಖದ ಮಡುವಿನಲ್ಲಿ ಕಣ್ಣೀರು ಹಾಕುತ್ತಿದೆ.ಅದೇ ಕೊಟ್ಟಿಗೆಹಾರದ ರಾಮನಗರ ನಿವಾಸಿ ರುಕಿಯ ಅವರ ಎರಡನೇ ಪುತ್ರಿ ಅಮ್ರಿನ್ ಮತ್ತು ಉಡುಪಿಯ ಕಾಪುವಿನ ಅಳಿಯ ಮಹಮ್ಮದ್ ಸಮೀರ್ ಅವರ ಸಾವಿನ ಸುದ್ದಿ ಕುಟುಂಬಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಹೌದು,ಕೇವಲ ಎಂಟು ತಿಂಗಳ ಹಿಂದೆ ಕೊಟ್ಟಿಗೆಹಾರದ ದಿವಂಗತ ವಾಜಿದ್ ಮತ್ತು ರುಕೀಯ ದಂಪತಿಗಳ ಎರಡನೇ ಪುತ್ರಿ ಅಮ್ರಿನ್(22)ವರ್ಷದ ಸುಂದರ ತರುಣಿ ಕಾಪುವಿನ ಮಹಮ್ಮದ್ ಸಮೀರ್(30) ಎಂಬ ಸುರದ್ರೂಪಿ ಯುವಕನನ್ನು ವರಿಸಿದ್ದಳು.ಮದುವೆಯಾಗಿ ಏನೇನೋ ಕನಸು ಇಟ್ಟುಕೊಂಡಿದ್ದ ಅಮ್ರಿನ್ ತಾನು ಬಹಳ ಬೇಗ ಇಹಲೋಕ ತ್ಯಜಿಸುತ್ತಾಳೆಂಬ ಸುಳಿವು ಕೂಡ ಆಕೆಗೆ ಇರಲಿಲ್ಲ.ರಂಜಾನ್ ಹಬ್ಬ ಹೊಸ ಮನೆಯಲ್ಲಿ ಹೊಸ ಕುಟುಂಬದ ಜೊತೆ ಸಂಭ್ರಮ ಆಚರಿಸಿ ಹಬ್ಬ ಆಚರಣೆಯ ಕನಸ್ಸು ಕಂಡವಳು ಆಕೆ.ಮೊನ್ನೆ ತಾನೇ ಕಾಲೇಜು ಮುಗಿಸಿ ಹಸೆಮಣೆ ಏರಿದ್ದಳು.ಆದರೆ ಅವಳ ಸಾವಿನ ಬಹು ಬೇಗದ ದುರಂತ ರಂಜಾನ್ ಹಬ್ಬದ ಸಂಭ್ರಮ ಕುಟುಂಬವನ್ನೇ ದುಃಖದ ಮಡುವಿನಲ್ಲಿ ಕೈತೊಳೆಯುವಂತೆ ಮಾಡಿದೆ.ಅವರ ಅಮ್ಮ ರುಕೀಯ ತನ್ನ ಮಗಳನ್ನು ಸಂಭ್ರಮದಲ್ಲೇ ಮದುವೆ ಮಾಡಿ ಗಂಡನ ಮನೆಗೆ ಸಂತೋಷವಾಗಿ ನೂರು ವರ್ಷ ಸುಖವಾಗಿ ಬಾಳಿ ಎಂಬ ಹಾರೈಕೆಯೊಂದಿಗೆ ಕಳುಹಿಸಿಕೊಟ್ಟಿದ್ದರು.ಮಗಳ ಮದುವೆಯ ಸಂಭ್ರಮದ ನೆನಪು ಮಾಸುವ ಮುನ್ನವೇ ಮಗಳು ಅಮ್ರಿನ್ ಮತ್ತು ಅಳಿಯ ಮಹಮ್ಮದ್ ಸಮೀರ್ ಇಹಲೋಕ ತ್ಯಜಿಸಿರುವುದು ಬರೀ ಕುಟುಂಬಕ್ಕೆ ಮಾತ್ರವಲ್ಲ ಅವರ ಊರಾದ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಜನತೆ ಕೂಡ ಇವರಿಬ್ಬರ ಅಕಾಲಿಕ ಸಾವಿಗೆ ಕಂಬನಿ ಮಿಡಿದಿದ್ದಾರೆ.ಹಸೆಮಣೆ ಏರಿ ಬಾಳುವೆ ಮಾಡಬೇಕಿದ್ದ ನವ ದಂಪತಿಗಳು ಮಂಗಳೂರಿನ ನಂತೂರು ಸಮೀಪದ ರಸ್ತೆಯಲ್ಲಿ ಲಾರಿಯ ರೂಪದಲ್ಲಿ ಬಂದ ಜವರಾಯ ಅಟ್ಟಹಾಸ ಮೆರೆದು ದಂಪತಿಗಳ ಬೈಕಿನ ಮೇಲೆ ಸವಾರಿ ಮಾಡಿ ಬಾಳನ್ನೇ ಹೊಸಕಿ ಹಾಕಿ ಇಹಲೋಕದ ದಾರಿ ತೋರಿಸಿರುವುದು ಮಾತ್ರ ಶೋಚನೀಯ! ಕುಟುಂಬದಲ್ಲಿ ರಂಜಾನ್ ಹಬ್ಬ ಬರೀ ನೋವಿನ ಬುಗ್ಗೆಯಾಗಿ ಕಣ್ಣೀರಧಾರೆಯಾಗಿ ಹರಿಯುತ್ತಿದೆ.ಇನ್ನು ಅಳಿಯ ಮಹಮ್ಮದ್ ಅವರ ಕಾಪುವಿನ ಕುಟುಂಬವೂ ಕೂಡ ಮಗ ಮತ್ತು ಸೊಸೆಯ ದುರ್ಮರಣದ ಶೋಕಾಚರಣೆಯಲ್ಲಿ ಮುಳುಗಿದೆ.ಕುಟುಂಬ ಮಗನ ಸಾವಿನಿಂದ ಕಂಗೆಟ್ಟಿದೆ.
ಮಗ ಮಹಮ್ಮದ್ ಸಮೀರ್ 8 ತಿಂಗಳ ಹಿಂದೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು ಮದುವೆಗಾಗಿ ಊರಿಗೆ ಬಂದಿದ್ದರು.ಮದುವೆಯಾಗಿ ಬಾಳು ಆರಂಬಿಸಬೇಕಾದ ಹುಡುಗ ಸಮೀರ್ ಮತ್ತು ಹುಡುಗಿ ಅಮ್ರಿನ್ ಅವರ ಅಪಘಾತ ಸಂಭವಿಸಿರುವುದು ಮಾತ್ರ ಎರಡೂ ಕುಟುಂಬದಲ್ಲಿ ನಡೆಯಬಾರದ ದುರಂತವೇ ಸರಿ. ವಿಧಿಯಾಟಕ್ಕೆ ನವ ದಂಪತಿಗಳು ಇಹಲೋಕ ತ್ಯಜಿಸಿದ್ದರೆ ಅವರ ನೆನಪು ಮಾತ್ರ ಕುಟುಂಬದಲ್ಲಿ ಅಚ್ಚಳಿಯದೇ ಉಳಿದಿದೆ ಎಂಬುದು ಮಾತ್ರ ನಿಗೂಢ ಸತ್ಯ.