ರಾಜ್ಯದ ಬಜೆಟ್ ಇದೊಂದು ಸುಳ್ಳಿನ ಬಜೆಟ್. – ಶೋಭಾ ಕರಂದ್ಲಾಜೆ

521

ಚಿಕ್ಕಮಗಳೂರು: ಕುಮಾರಸ್ವಾಮಿ ನಾಟ್ ಮೈ ಸಿಎಂ ಅನ್ನೋದು ಕೇವಲ ಕರಾವಳಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಹಾಗೇ ಅನ್ಸಿದೆ. ಸಾಲ ಮನ್ನಾ ಮಾಡ್ತೀನಿ, ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಸಾಲ ಹಾಗೂ ಖಾಸಗಿ ಸಾಲವನ್ನೂ ಮನ್ನಾ ಮಾಡ್ತೇನೆ ಎಂದು ಹೇಳಿ ಇವತ್ತು ಸಾಲ ಮನ್ನಾದ ಬಗ್ಗೆ ಸ್ಪಷ್ಟತೆ ಇಲ್ಲದಂತ ನಿಲುವು ಪಡೆದಿದ್ದಾರೆ. ಅವರಿಂದ ರಾಜ್ಯದ ಜನಕ್ಕೆ ಮೋಸ ಆಯ್ತು ಎಂದು ಸಂಸದೆ ಶೋಭಾ ಕರಂದ್ಲಾಜೆ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವ್ರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡದಲ್ಲಿ ಮಳೆಗೆ ಸಾವು-ನೋವುಗಳಾಗಿವೆ, ಮನೆ-ತೋಟ ಹಾಳಾಗಿದೆ. ಆದ್ರೆ, ಅವರಿಗೆ ಪರಿಹಾರ ಕೊಡಬೇಕು ಅನ್ನಿಸಿಲ್ಲ. ಕೆಟ್ಟ ರಾಜನೀತಿಯನ್ನ ಮಾಡ್ತಾ ಅವರು ಗೆದ್ದಂತ ರಾಮನಗರ, ಮಂಡ್ಯ, ಹಾಸನ, ಮೈಸೂರು ಇಷ್ಟೆ ಜಿಲ್ಲೆಗಳಿಗೆ ಅವರು ಮುಖ್ಯಮಂತ್ರಿ ಅವರು ರಾಜ್ಯದ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂದ್ರು. ಬಜೆಟ್ನಲ್ಲೂ ಕೂಡ ಅಷ್ಟೆ ಜಿಲ್ಲೆಗೆ ಅನುದಾನ ನೀಡಿದ್ದಾರೆ. ಇಲ್ಲಿ ಬಿಜೆಪಿ ಗೆದ್ದಿದೆ ಅನ್ನೋ ಕಾರಣಕ್ಕೆ ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.