ಬೆಳಗಾವಿ ಕಾಂಗ್ರೆಸ್ ​ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ.- ಈಶ್ವರ್​ ಖಂಡ್ರೆ…

261
firstsuddi

ಬೆಳಗಾವಿ :  ಪಿಎಲ್​ಡಿ ಬ್ಯಾಂಕ್​ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದು,  ಈ ಆಯ್ಕೆಗೆ ಎಲ್ಲರ ಸಹಮತವಿದೆ. ಬೆಳಗಾವಿ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ವರಿಷ್ಠರ ಸೂಚನೆಯಂತೆ ಎಲ್ಲವೂ ಇತ್ಯರ್ಥವಾಗಿದೆ. ಇದರಿಂದ ಸರಕಾರಕ್ಕೆ ಯಾವುದೇ ಅಪಾಯವಿಲ್ಲ ಹಾಗೂ ಪಿ.ಎಲ್.ಡಿ ಬ್ಯಾಂಕ್ ಚುನಾವಣೆ ಸಣ್ಣ ಚುನಾವಣೆ. ಸೌಹಾರ್ದತೆಯಿಂದ ಬಗೆಹರಿಸಲಾಗಿದೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ಇರಲಿದೆ ಎಂದು ಎಂದು ಈಶ್ವರ್​ ಖಂಡ್ರೆ ಸುದ್ದಿಗೊಷ್ಟಿಯಲ್ಲಿ ತಿಳಿಸಿದ್ದಾರೆ