ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದಲ್ಲಿ ಭೂಮಿಯೊಳಗಿನ ಭಾರಿ ಶಬ್ದಕ್ಕೆ ಕಾರಣ ತಿಳಿಯಲು ಮುಂದಾದ ತಜ್ಞರು…

525
firstsuddi

ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಅತ್ತಿಕೂಡಿಗೆ ಗ್ರಾಮ ಪಂಚಾಯಿತಿಯ ಹತ್ತಾರು ಹಳ್ಳಿಯ ಭೂಮಿಯೊಳಗಿಂದ ಕೇಳಿ ಬರ್ತಿದ್ದ ಭಾರೀ ಶಬ್ಧಕ್ಕೆ ಕಂಗಾಲಾಗಿದ್ರು. ಕಳೆದ ಆರು ತಿಂಗಳಿಂದ 200ಕ್ಕೂ ಹೆಚ್ಚು ಬಾರಿ ಬಂದಿದ್ದ ಭಾರೀ ಶಬ್ಧಕ್ಕೆ ಮಲೆನಾಡಿಗರು ನಮಗೆ ಭವಿಷ್ಯ ಇದ್ಯೋ-ಇಲ್ವೋ ಎಂದು ಆತಂಕಕ್ಕೀಡಾಗಿದ್ರು. ಎರಡ್ಮೂರು ಬಾರಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸಿ, ಆತಂಕಪಡುವ ಅಗತ್ಯವಿಲ್ಲ ಎಂದಿದ್ರು ಸ್ಥಳಿಯರ ಆತಂಕ ಮಾತ್ರ ದೂರಾಗಿರಲಿಲ್ಲ. ಇದೀಗ, ಮತ್ತೆ ಸ್ಥಳಕ್ಕೆ ಭೇಟಿ ನೀಡಿರೋ ಬೆಂಗಳೂರಿನ ಕೆ.ಎಸ್.ಎನ್.ಡಿ.ಎಂ.ಸಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಶಬ್ಧಕ್ಕೆ ಕಾರಣ ತಿಳಿಯಲು ಕೊಗ್ರೆ ಗ್ರಾಮದಲ್ಲಿ ಭೂಮಾಪನ ಉಪಕರಣಗಳನ್ನ ಅಳವಡಿಸಿದ್ದಾರೆ. ಈ ಉಪಕರಣ ಆರು ತಿಂಗಳ ಕಾಲ ಗ್ರಾಮದಲ್ಲೇ ಇರಲಿದ್ದು, ಭೂಮಿಯೊಳಗಿಂದ ಬರುವ ಶಬ್ಧದ ಪ್ರಮಾಣ ಹಾಗೂ ಕಾರಣ ತಿಳಿಯಲಿದೆ, ಬಳಿಕ ಅದರ ಡಾಟಾವನ್ನ ನಿಮಗೂ ನೀಡುತ್ತೇವೆ ಎಂದಿರೋದ್ರಿಂದ ಸ್ಥಳಿಯರ ಆತಂಕ ತಾತ್ಕಾಲಿಕವಾಗಿ ದೂರಾಗಿದೆ.