ಕನ್ನಡ ಭಾಷೆಯ ಇತಿಹಾಸವನ್ನು ಉಳಿಸುವ ಅವಶ್ಯಕತೆ ಇಲ್ಲ ಬದಲಾಗಿ ಬಳಸಿದರೆ ಸಾಕು.- ಅರ್ಜುನ್ ದೇವಾಲದಕೆರೆ

650
firstsuddi

ಮೂಡಿಗೆರೆ- ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ನಗರದ ಜೇಸಿ ಭವನದಲ್ಲಿ ಏರ್ಪಡಿಸಲಾಗಿದ್ದ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಎಂ.ಕೆ ಪ್ರಾಣೇಶ್ ರವರು ಸಮಾಜಕ್ಕೆ ಕೆಂಪೆಗೌಡರ ಕೊಡುಗೆ ಅಪಾರವಾಗಿದ್ದು, ಒಕ್ಕಲಿಗ ಸಮುದಾಯದಲ್ಲಿ ಜನಿಸಿ ಬೃಹತ್ ಬೆಂಗಳೂರು ನಗರದ ಸಂಸ್ಥಾಪಕರಾದ ಕೆಂಪೇಗೌಡ ಅವರು ನಮಗೆ ಮಾದರಿಯಾದ್ದಾರೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಅರ್ಜುನ್ ದೇವಾಲದಕೆರೆ ಅವರು ಮಾತನಾಡಿ ಭಗತ್ ಸಿಂಗ್,ಚಂದ್ರಶೇಖರ ಆಜಾದ್,ಮುಂತಾದವರ ಇತಿಹಾಸವನ್ನು ಮುಚ್ಚಿ ಈಗಿನ ರಾಜಕರಣಿಗಳು ತಮ್ಮ ಹೆಸರನ್ನು ಇತಿಹಾಸ ಪುಟವನ್ನು ಸೇರಿಸುತ್ತಿರುವುದು ವಿಪರ್ಯಾಸ ಎಂದು ಹೇಳಿದ ಅವರು ನಂತರ ನಾಡಪ್ರಭು ಕೆಂಪೇಗೌಡರವರ ಜೀವನ ಮತ್ತು ಸಾಧನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದು, ಎರಡು ಸಾವಿರ ವರ್ಷದ ಕನ್ನಡ ಭಾಷೆಯ ಇತಿಹಾಸವನ್ನು ಉಳಿಸುವ ಅವಶ್ಯಕತೆ ಇಲ್ಲ ಬದಲಾಗಿ ಬಳಸಿದರೆ ಸಾಕು ಎಂಬುದನ್ನು ಹಲವು ಸಂಘಟನೆಗಳಿಗೆ ಎಚ್ಚರಿಸಿದರು. ಸ್ವಾತಂತ್ರ್ಯ ಹೇಗೆ ಬಂತು ಎಂಬುದನ್ನು ಮಕ್ಕಳಿಗೆ ತಿಳಿಸುವಂತೆ ಪೋಷಕರಿಗೆ ಮನವಿ ಮಾಡಿದರು. ಹಾಗೂ ಎ.ಬಿ.ಸಿ.ಡಿ ಎಂಬುದನ್ನು ಎ ಫಾರ್ ಆಪಲ್, ಬಿ ಫಾರ್ ಬನಾನ, ಎಂಬುದನ್ನು ಬಿಟ್ಟು ಎ ಫಾರ್ ಅಬ್ದುಲ್ ಕಲಾಂ, ಬಿ ಫಾರ್ ಭಗತ್ ಸಿಂಗ್, ಸಿ ಫಾರ್ ಚಂದ್ರಶೇಖರ್ ಅಜಾದ್ ಎಂದು ಮಕ್ಕಳಿಗೆ ಹೇಳಿಕೊಡುವಂತೆ ತಿಳಿಸಿದರು.
ಶಾಸಕ ಎಂ.ಪಿ ಕುಮಾರಸ್ವಾಮಿರವರು ಮಾತನಾಡಿ ನಾಡಪ್ರಭು ಕೆಂಪೇಗೌಡ ಅವರ ಜಯಂತಿಗೆ ಶುಭ ಹಾರೈಸಿದರು. ಹಾಗೂ ಕಾರ್ಯಕ್ರಮದಲ್ಲಿ ಜಿಲ್ಲಾ ವಕ್ಕಲಿಗರ ಸಂಘದ ನಿರ್ದೇಶಕರಾದ ಎಂ.ಎಸ್. ಪ್ರದೀಪ್ ಮುಗ್ರಹಳ್ಳಿ, ಹಾಗೂ ಜೆ.ಡಿ.ಎಸ್ ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್, ಮದೀಶ್,ಶಾಮಣ್ಣ ಬಣಕಲ್, ಭಾರತಿ ರವೀಂದ್ರ ,ಮುಂತಾದವರು ಉಪಸ್ಥಿತರಿದ್ದರು.