ನವರಾತ್ರಿ ಹಬ್ಬದ ಪ್ರಯುಕ್ತ ಚಿಕ್ಕಮಗಳೂರಿನ ಆಶ್ವಥ್ಥನಾರಾಯಣಾಚಾರ್ಯ ಜೋಷಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಗೊಂಬೆಗಳು ಕಣ್ಮನ ಸೆಳೆಯುತ್ತಿವೆ.

558

ಚಿಕ್ಕಮಗಳೂರು: ಶರನ್ನವರಾತ್ರಿ ಹಬ್ಬದ ಪ್ರಯುಕ್ತ ನಗರದ ಕೋಟೆ ಬಡಾವಣೆಯ ಆಶ್ವಥ್ಥನಾರಾಯಣಾಚಾರ್ಯ ಜೋಷಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಪಟ್ಟದ ಬೊಂಬೆಗಳು ಮೈಸೂರಿನ ಯಧು ವಂಶಸ್ಥರ ಸಾಂಪ್ರದಾಯಿಕ ಮತ್ತು ಸಾಂಸ್ಕøತಿಕ ವೈಭವವನ್ನು ಅನಾವರಣಗೊಳಿಸಿವೆ.ಶ್ರೀನಿವಾಸ ಕಲ್ಯಾಣದ ವೈಭವವನ್ನು ಸಾರುವ ಬೊಂಬೆಗಳು, ಮಹಾವಿಷ್ಣುವಿನ ದಶಾವತಾರದ ಬೊಂಬೆಗಳು, ಶ್ರೀಕೃಷ್ಣನ ವಿವಿಧ ರೂಪಗಳ ಬೊಂಬೆಗಳು, ಗೀತೋಪದೇಶದ ಬೊಂಬೆಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.
ವಿಶ್ವವಿಖ್ಯಾತ ಮೈಸೂರು ದಸರಾದ ವಿವಿಧ ಸನ್ನಿವೇಶಗಳನ್ನು ಮತ್ತು ನಾಡಿನ ಅರಸರಾದ ಯಧುವಂಶಸ್ಥರ ದರ್ಬಾರಿನ ಸಾಂಪ್ರದಾಯಿಕ ಗೊಂಬೆಗಳು ಕಣ್ಮನ ಸೆಳೆಯುತ್ತಿವೆ.ಪಟ್ಟದ ಬೊಂಬೆಗಳ ಕುರಿತು ವಿವರಿಸಿದ ಅನುರಾಧಾ ಜೋಷಿ ತಮ್ಮ ತವರು ಮನೆಯ ನವರಾತ್ರಿ ಹಬ್ಬದ ಸಂಪ್ರದಾಯವನ್ನು ತಾವು ಮುಂದುವರೆಸಿಕೊಂಡು ಬರುತ್ತಿದ್ದು, ನಮ್ಮ ಸಂಸ್ಕøತಿ ಮತ್ತು ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಉಳಿಸುವ ಸಣ್ಣ ಪ್ರಯತ್ನ ಇದಾಗಿದೆ ಎಂದರು.ಮಹಿಳೆಯರು ನಮ್ಮ ಸಂಸ್ಕøತಿ, ಸಂಪ್ರದಾಯ ಮತ್ತು ಹಬ್ಬಗಳನ್ನು ತಪ್ಪದೇ ಆಚರಿಸಿದರೆ ಮಾತ್ರ ಅವು ಮುಂದಿನ ಪೀಳಿಗೆಗೆ ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.