ರಾಜ್ಯದಲ್ಲಿ ಮೂವರು ಸಿ.ಎಂ : ಬಿಜೆಪಿ ಟ್ವಿಟರ್ ನಲ್ಲಿ ಲೇವಡಿ.

265
firstsuddi

ಬೆಂಗಳೂರು- ಟ್ವಿಟರ್ ಮೂಲಕ ದೇವೇಗೌಡರ ಕುಟುಂಬವನ್ನು ಲೇವಡಿ ಮಾಡಿರುವ ಬಿಜೆಪಿ ಎಚ್.ಡಿ.ಕುಮಾರಸ್ವಾಮಿ ದುರ್ಬಲ ಸಿ.ಎಂ, ಎಚ್.ಡಿ.ರೇವಣ್ಣ ಸೂಪರ್ ಸಿ.ಎಂ, ಎಚ್.ಡಿ.ದೇವೇಗೌಡ ಸುಪ್ರೀಂ ಸಿ.ಎಂ ಎಂದು ಟ್ವೀಟ್ ಮಾಡಿದ್ದು, ಇಷ್ಟು ಮುಖ್ಯಮಂತ್ರಿಗಳಿದ್ದರು ಸರ್ಕಾರ ಯಾವಾಗ ಕೆಲಸ ಆರಂಭಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದು,ನಿಜವಾದ ಮುಖ್ಯಮಂತ್ರಿ ಯಾರು ಎಂಬುದನ್ನು ಮೊದಲು ದೇವೇಗೌಡರ ಕುಟುಂಬ ನಿರ್ಧಾರ ಮಾಡಲಿ ಎಂದು ಟ್ವಿಟರ್ ಮೂಲಕ ಟೀಕಿಸಲಾಗಿದೆ.